ಟೋಲ್ ಬೂತ್ ಗಳನ್ನು ತೆರವುಗೊಳಿಸಿ, ಜಿಪಿಎಸ್ ಆಧರಿಸಿ ಟೋಲ್ ಸಂಗ್ರಹ: ಗಡ್ಕರಿ

Update: 2021-03-18 10:42 GMT

ಹೊಸದಿಲ್ಲಿ: ಟೋಲ್ ಬೂತ್ ಗಳನ್ನು ತೆರವುಗೊಳಿಸಿ ಇನ್ನೊಂದು ವರ್ಷದೊಳಗೆ ಸಂಪೂರ್ಣ ಜಿಪಿಎಸ್ ಆಧರಿತ ಟೋಲ್ ಸಂಗ್ರಹವನ್ನು ಜಾರಿಗೆ ತರಲಾಗುವುದು ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

ಶೇಕಡಾ 93ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತಿವೆ. ಆದರೆ ಉಳಿದ ಶೇ.7ರಷ್ಟು ಜನರು ಡಬಲ್ ಟೋಲ್ ಪಾವತಿಸಿದರೂ ಫಾಸ್ಟ್ ಟ್ಯಾಗ್ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಒಂದು ವರ್ಷದೊಳಗೆ ದೇಶದ ಎಲ್ಲ ಭೌತಿಕ ಟೋಲ್ ಬೂತ್ ಗಳನ್ನು ತೆಗೆದುಹಾಕಲಾಗುವುದು ಎಂದು ನಾನು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದರರ್ಥ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ನಡೆಯಲಿದೆ. ವಾಹನಗಳ ಮೇಲಿನ ಜಿಪಿಎಸ್ ಇಮೇಜಿಂಗ್ ಆಧರಿಸಿ ಹಣವನ್ನು ಸಂಗ್ರಹಿಸಲಾಗುವುದು ಎಂದು ಲೋಕಸಭೆಯಲ್ಲಿ ಪ್ರಶ್ನೆಯ ಸಮಯದಲ್ಲಿ ಗಡ್ಕರಿ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News