ನದಿಯಿಂದ ಹಾರ್ಡ್ ಡಿಸ್ಕ್, ಸಿಪಿಐ, ನಂಬರ್ ಪ್ಲೇಟ್ ವಶಕ್ಕೆ ಪಡೆದ ಎನ್‌ಐಎ

Update: 2021-03-28 18:33 GMT

ಮುಂಬೈ, ಮಾ. 28: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈಯ ನಿವಾಸ ‘ಆ್ಯಂಟಿಲಾ’ದ ಹೊರಗೆ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಝೆಯ ಸಮ್ಮುಖದಲ್ಲಿ ರವಿವಾರ ಮೀಠಿ ನದಿಯಿಂದ ಕಂಪ್ಯೂಟರ್ ಸಿಪಿಯು, ವಾಹನದ ನಂಬರ್ ಪ್ಲೇಟ್, ಎರಡು ಡಿವಿಆರ್ ಹಾಗೂ ಲ್ಯಾಪ್‌ಟಾಪ್ ಅನ್ನು ಪತ್ತೆ ಹಚ್ಚಿದೆ.

ಎನ್‌ಐಎ ಅಪರಾಹ್ನ 3.15ಕ್ಕೆ ವಾಝೆ ಅವರನ್ನು ಮುಂಬೈಯ ಬಾಂದ್ರಾ ಕುಲ್ಲಾ ಸಂಕೀರ್ಣದಲ್ಲಿರುವ ಮೀಠಿ ನದಿ ಸೇತುವೆಗೆ ಕರೆದೊಯ್ದಿತ್ತು. ಮುಳುಗು ತಜ್ಞರು ನದಿಯಲ್ಲಿ ಮುಳುಗಿ ಈ ಸಾಕ್ಞ್ಯಗಳನ್ನು ಹೊರ ತೆಗೆದರು.

ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ತಾನು ಹಲವು ವಸ್ತುಗಳನ್ನು ನದಿಗೆ ಎಸೆದಿದ್ದೇನೆ ಎಂದು ವಿಚಾರಣೆಯ ಸಂದರ್ಭ ವಝೆ ಎನ್‌ಐಗೆ ತಿಳಿಸಿದ್ದರು. ಈ ಎಲ್ಲಾ ವಸ್ತುಗಳು ಆ್ಯಂಟಿಲಾ ಹಾಗೂ ಮನ್‌ಸುಖ್ ಹಿರೇನ್ ಪ್ರಕರಣಕ್ಕೆ ಸಂಬಂಧಿಸಿದವು ಎಂದು ಎನ್‌ಐಎಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News