ನಂದಿಗ್ರಾಮ: ವೀಲ್‌ ಚೇರ್‌ ನಲ್ಲಿ ಕುಳಿತು ತಮ್ಮ ಬೆಂಬಲಿಗರೊಂದಿಗೆ 8 ಕಿ.ಮೀ ಪಾದಯಾತ್ರೆ ನಡೆಸಿದ ಮಮತಾ ಬ್ಯಾನರ್ಜಿ

Update: 2021-03-29 12:49 GMT

ಕೋಲ್ಕತಾ: ಪಶ್ಚಿಮಬಂಗಾಳ ವಿಧಾನಸಭೆಗೆ ಮೊದಲ ಹಂತದ ಚುನಾವಣೆಯು ಕೊನೆಗೊಂಡ ಎರಡು ದಿನಗಳ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ನಂದಿಗ್ರಾಮದ ಖುಧಿರಾಮ್ ಮೋರೆಯಿಂದ ಠಾಕೂರ್ ಚೌಕದ ತನಕ ಪಾದಯಾತ್ರೆ ನಡೆಸಿದರು.

ಮಮತಾ ಅವರು ಟಿಎಂಸಿಯಿಂದ ಪಕ್ಷಾಂತರಗೊಂಡಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ವಿರುದ್ದ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪೂರ್ವ ಮೆದಿನಿಪುರ ಜಿಲ್ಲೆಯಲ್ಲಿರುವ ಭಾರೀ ಕುತೂಹಲ ಕೆರಳಿಸಿರುವ ನಂದಿಗ್ರಾಮ ಸಹಿತ ಇತರ 29 ಕ್ಷೇತ್ರಗಳಲ್ಲಿ ಎಪ್ರಿಲ್ 1 ರಂದು 2ನೇ ಹಂತದ ಮತದಾನ ನಡೆಯಲಿದೆ.

ಮಮತಾ ಅವರು ಗಾಲಿಚಕ್ರದಲ್ಲಿ ಟಿಎಂಸಿ ನಾಯಕರು ಹಾಗೂ ಬೆಂಬಲಿಗರ ಬೆಂಬಲದಿಂದ 8 ಕಿ.ಮೀ.ದೂರ ಪಾದಯಾತ್ರೆ ನಡೆಸಿದರು. ಈ ವೇಳೆ ಜನರು ಎರಡೂ ಕೈಜೋಡಿಸಿ ಸ್ವಾಗತಿಸಿದರು.

ಎರಡನೇ ಹಂತದ ಮತದಾನ ಮುಗಿಯುವ ತನಕ ನಂದಿಗ್ರಾಮದಲ್ಲೇ ಉಳಿಯುವೆ ಎಂದು ಮಮತಾ ಘೋಷಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ನಂದಿಗ್ರಾಮದಲ್ಲಿ ರೋಡ್ ಶೋ ನಡೆಸುವ ಸಾಧ್ಯತೆಯಿದೆ. 2ನೇ ಹಂತದ ಚುನಾವಣೆಗೆ ಪ್ರಚಾರ ಕಾರ್ಯವು ಎ.30ರಂದು ಸಂಜೆ 5ಕ್ಕೆ ಕೊನೆಯಾಗಲಿದೆ.

ಎರಡನೇ ಹಂತದ ಮತದಾನವು ಎಪ್ರಿಲ್ 1ರಂದು ನಡೆಯಲಿದೆ. ಉಳಿದ ಹಂತಗಳ ಮತದಾನವು ಎ.6, ಎ.10, ಎ.17, ಎ.22, ಎ.26 ಹಾಗೂ ಎ.29ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News