ಪತ್ರಿಕಾಗೋಷ್ಠಿಯಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಪದ ಬಳಸಿದ ಯತಿ ನರಸಿಂಗಾನಂದ

Update: 2021-04-03 09:16 GMT

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ದೇವಸ್ಥಾನದಲ್ಲಿ ನೀರು ಕುಡಿಯಲೆಂದು ಬಂದ ಬಾಲಕನಿಗೆ ಹಲ್ಲೆಗೈದಿದ್ದ ದೇವಾಲಯದ ಮುಖ್ಯಸ್ಥ ಯತಿ ನರಸಿಂಗಾನಂದ್‌ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ. ಈ ವೀಡಿಯೋ ಕುರಿತಾದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನರಸಿಂಗಾನಂದನನ್ನು ಬಂಧಿಸುವಂತೆ ಸಾಮಾಜಿಕ ತಾಣದಾದ್ಯಂತ ಅಭಿಯಾನಗಳು ಪ್ರಾರಂಭವಾಗಿವೆ.

ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನರಸಿಂಗಾನಂದನು, ಮುಸ್ಲಿಮರ ಪ್ರವಾದಿ ಕುರಿತಾದಂತೆ ಅಸಭ್ಯ ಮತ್ತು ಅವಹೇಳನಕಾರಿ ಪದ ಬಳಕೆಗೈದಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಸಾರ್ವಜನಿಕವಾಗಿ ಇಂತಹಾ ಹೇಳಿಕೆ ನೀಡಿದ್ದರೂ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

"ತಾನು ಮಾಡದ ಜೋಕ್‌ ಗಾಗಿ ಮುನವ್ವರ್‌ ಫಾರೂಕಿಯನ್ನು ಬಂಧಿಸಿ ಜಾಮೀನು ನಿರಾಖರಿಸಿ ಜೈಲಿನಲ್ಲಿಡಲಾಗಿತ್ತು. ಆದರೆ ಸಾರ್ವಜನಿಕವಾಗಿ ಪತ್ರಿಕಾಗೋಷ್ಠಿಯಲ್ಲೇ ಮುಸ್ಲಿಮರ ಪ್ರವಾದಿಯನ್ನು ಅವಹೇಳನಗೈದಿರುವ ನರಸಿಂಗಾನಂದನ ವಿರುದ್ಧ ಕ್ರಮ ಯಾಕಿಲ್ಲ?" ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಪ್ರಶ್ನಿಸಿದ್ದಾರಲ್ಲದೇ, ಆತನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News