ಅಸ್ಟ್ರಾಝೆನಿಕ ಲಸಿಕೆಗೆ ಸುರಕ್ಷಿತ: ಬ್ರಿಟನ್

Update: 2021-04-04 18:47 GMT

 ಲಂಡನ್,ಎ.4: ಆಕ್ಸ್ಫರ್ಡ್ ಹಾಗೂ ಆಸ್ಟ್ರಾಝೆನಿಕ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ, ಭಾರತದಲ್ಲಿ ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಸೇರಂ ಇನ್ಸೂಟಿಟ್ಯೂಟ್ ಉತ್ಪಾದಿಸುತ್ತಿರುವ ಕೋವಿಡ್ ಪರಿಣಾಮಕಾರಿಯೆಂದು ಹಾಗೂ ಸುರಕ್ಷಿತವಾದುದೆಂದು ಬ್ರಿಟನ್ ನ ಔಷಧಿ ಹಾಗೂ ಆರೋಗ್ಯಪಾಲನಾ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ ರವಿವಾರ ತಿಳಿಸಿದೆ.

ಬ್ರಿಟನ್ ನಲ್ಲಿ ಈವರೆಗೆ 18 ಲಕ್ಷ ಮಂದಿ ಈ ಲಸಿಕೆಯನ್ನು ಪಡೆದಿದ್ದು, ಅವರಲ್ಲಿ 30 ಮಂದಿ ರಕ್ತಹೆಪ್ಪುಗಟ್ಟುವ ತೊಂದರೆಯುಂಟಾಗಿದೆ. ಇವರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆಂದು ಏಜೆನ್ಸಿ ತಿಳಿಸಿದೆ. ಆದರೆ ಈ ಸಾವುಗಳಿಗೆ ಕೊರೋನ ಲಸಿಕೆ ಕಾರಣವೆಂದು ಈವರೆಗೆ ದೃಢಪಟ್ಟಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News