ಅನುಮತಿಯಿಲ್ಲದೆ ಭಾರತದ ಸಮುದ್ರ ಪ್ರದೇಶದಲ್ಲಿ ಅಮೆರಿಕ ನೌಕಾಪಡೆಯ ಕಾರ್ಯಾಚರಣೆ

Update: 2021-04-09 17:20 GMT

► ಹೊಸ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿ?

ಹೊಸದಿಲ್ಲಿ,ಮಾ.21: ಭಾರತದ ಅನುಮತಿಯಿಲ್ಲದೆ ಅಮೆರಿಕದ ನೌಕಾಪಡೆಯ ಸಮರನೌಕೆಯೊಂದು ಭಾರತೀಯ ಸಾಗರಪ್ರದೇಶದಲ್ಲಿ ಕಾರ್ಯಾಚರಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಿತ ಕ್ಷಿಪಣಿ ಧ್ವಂಸ ನೌಕೆ ಯುಎಸ್‌ಎಸ್ ಜಾನ್‌ಪಾಲ್ ಎಪ್ರಿಲ್ 7ರಂದು ಲಕ್ಷದ್ವೀಪ ಪ್ರದೇಶಲ್ಲಿ ಕಾರ್ಯಾಚರಣೆ ನಡೆಸಿದ್ದಾಗಿ ಅಮೆರಿಕ ಸೆವೆಂತ್ ಫ್ಲೀಟ್ ಸಮರನೌಕೆಯ  ಕಮಾಂಡರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 2021ರ ಎಪ್ರಿಲ್ 7ರಂದು ಯುಎಸ್‌ಎಸ್ ಪೌಲ್ ಜಾನ್ಸ್ (ಡಿಡಿಜಿ 53) ನೌಕೆಯು ತನ್ನ ನೌಕಾಸಂಚಾರದ ಹಕ್ಕು ಹಾಗೂ ಸ್ವಾತಂತ್ರ್ಯ(ಎಫ್‌ಎನ್‌ಓಪಿ) ವನ್ನು ಲಕ್ಷದ್ವೀಪ ದ್ವೀಪಸ್ತೋಮದಿಂದ 130 ನಾಟಿಕಲ್ ಮೈಲು ಪಶ್ಚಿಮದಲ್ಲಿರುವ ಭಾರತದ ವಿಶೇಷ ಆರ್ಥಿಕ ವಲಯ ಪ್ರದೇಶದಲ್ಲಿ, ಭಾರತದ ಪೂರ್ವಭಾವಿ ಸಮ್ಮತಿಯನ್ನು ಕೋರದೆಯೇ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಚಲಾಯಿಸಿದೆ’’ ಎಂದು ಅಮೆರಿಕದ ಸೆವೆಂತ್ ಫ್ಲೀಟ್ ಕಮಾಂಡರ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇತರ ದೇಶಗಳು ಲಕ್ಷದ್ವೀಪದ ಸಮೀಪದಲ್ಲಿರುವ ತನ್ನ ವಿಶೇಷ ಆರ್ಥಿಕವಲಯ ಪ್ರದೇಶದಲ್ಲಿ ಸೇನಾ ಕವಾಯತು ಅಥವಾ ಮಿಲಿಟರಿ ಕೌಶಲ ಪ್ರದರ್ಶನವನ್ನು ನಡೆಸಲು ತನ್ನ ಪೂರ್ವಭಾವಿ ಅನುಮತಿಯನ್ನು ಪಡೆಯುವುದನ್ನು ಭಾರತ ಕಡ್ಡಾಯಗೊಳಿಸಿದೆ. ಆದರೆ ಭಾರತದ ಈ ನಿಲುವು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಲ್ಲವೆಂದು ಅದು ಹೇಳಿದೆ.

 ‘‘ಸಾಗರ ಗಡಿಯ ಬಗ್ಗೆ ಭಾರತದ ಅತಿರೇಕದ ಪ್ರತಿಪಾದನೆಗಳನ್ನು ಪ್ರಶ್ನಿಸುವ ಮೂಲಕ ನೌಕಾಯಾನ ಕಾರ್ಯಾಚರಣೆಯ ಸ್ವಾತಂತ್ರ (ಎಫ್‌ಎನ್‌ಓಪಿ)ವು ಸಾಗರಬಳಕೆ ಕುರಿತ ಹಕ್ಕುಗಳ, ಸ್ವಾತಂತ್ರ್ಯಗಳು ಹಾಗೂ ಕಾನೂನುಬದ್ಧ ಬಳಕೆಗಳನ್ನು ಎತ್ತಿಹಿಡಿದಿದೆ’’ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಭಾರತ-ಫೆಸಿಫಿಕ್ ಸಾಗರಪ್ರಾಂತದಲ್ಲಿ ಅಮೆರಿಕ ಪಡೆಗಳು ದೈನಂದಿನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಎಲ್ಲಾ ಕಾರ್ಯಾಚರಣೆಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ವಿನ್ಯಾಸಗೊಂಡಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನು ಎಲ್ಲೆಲ್ಲಿ ಅನುಮತಿ ನೀಡುವುದೋ ಅಲ್ಲೆಲ್ಲಾ ಅಮೆರಿಕವು ಹಾರಾಟ ನಡೆಸಲಿದೆ, ನೌಕಾಯಾನ ನಡೆಸಲಿದೆ ಹಾಗೂ ಕಾರ್ಯನಿರ್ವಹಿಸಲಿದೆ ಎಂದು ಹೇಳಿಕೆ ತಿಳಿಸಿದೆ.

  ‘‘ಅಮೆರಿಕ ನೌಕಾಪಡೆಯ ಸೆವೆಂತ್ ಫ್ಲೀಟ್ ನಿಯಮಿತವಾದ ನೌಕಾಯಾನ ಕಾರ್ಯಾಚರಣೆ ಸ್ವಾತಂತ್ರ್ಯ (ಎಫ್‌ಎನ್‌ಓಪಿ)ಗಳನ್ನು ನಡೆಸಿದೆ ನಾವು ಈ ಹಿಂದೆಯೂ ಇದನ್ನು ನಡೆಸಿದ್ದೆವು ಹಾಗೂ ಭವಿಷ್ಯದಲ್ಲಿಯೂ ಅದನ್ನು ಮುಂದುವರಿಸಲಿದ್ದೇವೆ. ಎಫ್‌ಓಎನ್‌ಓಪಿಗಳು ಕೇವಲ ಒಂದು ದೇಶಕ್ಕೆ ಸೀಮಿತವಾದುದಲ್ಲ’’ ಎಂದು ಅದು ಹೇಳಿದೆ.

ಅಮೆರಿಕದ ಉದ್ದಟತನಕ್ಕೆ ಭಾರತ ಕಳವಳ

   ಮುಂಬೈ,ಎ.9: ಲಕ್ಷದ್ವೀಪ ದ್ವೀಪಸ್ತೋಮದ ಪ್ರತ್ಯೇಕ ಆರ್ಥಿಕ ವಲಯ (ಇಇಝೆಡ್)ದ ಸಮುದ್ರಪ್ರದೇಶದ ವ್ಯಾಪ್ತಿಯಲ್ಲಿ ಅಮೆರಿಕ ನೌಕಾಪಡೆಯ 7 ಫ್ಲೀಟ್ ಸಮರ ನೌಕೆಯು ‘ನೌಕಾಯಾನದ ಸ್ವಾತಂತ್ರ್ಯ’ ಕಾರ್ಯಾಚರಣೆಯನ್ನು ತನ್ನ ಅನುಮತಿಯಿಲ್ಲದೆ ನಡೆಸಿರುವ ಕುರಿತು ತನ್ನ ಆತಂಕವನ್ನು ಅಮೆರಿಕಕ್ಕೆ ತಿಳಿಸಿರುವುದಾಗಿ ಭಾರತ ಶುಕ್ರವಾರ ತಿಳಿಸಿದೆ.

‘‘ ಸಾಗರ ಕಾನೂನು ಕುರಿತ ವಿಶ್ವಸಂಸ್ಥೆಯ ಒಡಂಬಡಿಕೆಯು. ಪ್ರತ್ಯೇಕ ಆರ್ಥಿಕ ವಲಯದಲ್ಲಿ ಇತರ ದೇಶಗಳಿಗೆ ಅಲ್ಲಿನ ಕರಾವಳಿ ದೇಶದ ಅನುಮತಿಯಿಲ್ಲದೆ ಸೇನಾ ಕವಾಯತುಗಳು ಅಥವಾ ಮಿಲಿಟರಿ ಚಟುವಟಿಕೆಗಳನ್ನು ನಡೆಸಲು ಇತರ ದೇಶಗಳಿಗೆ ಅನುಮತಿ ನೀಡುವುದಿಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಯುಎಸ್‌ಎಸ್ ಜಾನ್ ಪೌಲ್ ಜಾನ್ಸ್ ಮಲಕ್ಕಾ ಜಲಸಂಧಿಯಿಂದ ಪರ್ಶಿಯನ್ ಕೊಲ್ಲಿಯೆಡೆಗೆ ಸಾಗುತ್ತಿರುವುದರ ಮೇಲೆ ನಿರಂತರವಾಗಿ ನಿಗಾವಿರಿಸಲಾಗಿದೆ.ಪ್ರತ್ಯೇಕ ಆರ್ಥಿಕ ವಲಯದ ದಾರಿಯಾಗಿ ನಡೆಯುವ ಈ ಸಂಚಾರದ ಕುರಿತಾಗಿ ನಮ್ಮ ಕಳವಳವನ್ನು ರಾಜತಾಂತ್ರಿಕ ವಾಹಿನಿಗಳ ಮೂಲಕ ಅಮೆರಿಕ ಸರಕಾರಕ್ಕೆ ತಿಳಿಸಲಾಗಿದೆ’’ ಎಂದು ಅವರು ಹೇಳಿದರು.

2021ರ ಎಪ್ರಿಲ್ 7ರಂದು ಯುಎಸ್‌ಎಸ್ ಪೌಲ್ ಜಾನ್ಸ್ (ಡಿಡಿಜಿ 53) ತನ್ನ ನೌಕಾಸಂಚಾರದ ಹಕ್ಕು ಹಾಗೂ ಸ್ವಾತಂತ್ರವನ್ನು ಲಕ್ಷದ್ವೀಪ ದ್ವೀಪಸ್ತೋಮದಿಂದ 130 ನಾಟಿಕಲ್ ಮೈಲು ಪಶ್ಚಿಮದಲ್ಲಿರುವ ಭಾರತದ ವಿಶೇಷ ಆರ್ಥಿಕ ವಲಯ ಪ್ರದೇಶದಲ್ಲಿ, ಭಾರತದ ಪೂರ್ವಭಾವಿ ಸಮ್ಮತಿಯನ್ನು ಕೋರದೆಯೇ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಡೆಸಿದೆ’’ ಎಂದು ಅಮೆರಿಕದ ನೌಕಾಪಡೆಯ ಸೆವೆಂತ್ ಫ್ಲೀಟ್ ಸಮರ ನೌಕೆಯ ಸಾರ್ವಜನಿಕ ವ್ಯವಹಾರಗಳ ವಿಭಾಗವು ಹೇಳಿಕೆಯೊಂದರಲ್ಲಿ ತಿಳಿಸಿತ್ತು.

 ಈ ಹೇಳಿಕೆಯು ಭಾರತ -ಅಮೆರಿಕ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ.ವಿಶೇಷವಾಗಿ ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಚೀನಾದ ನೌಕಾಯಾನ ವಿಸ್ತರಣಾವಾದವನ್ನು ಭಾರತ ಹಾಗೂ ಅಮೆರಿಕಗಳೆರಡೂ ವಿರೋಧಿಸುತ್ತಾ ಬಂದಿವೆ. ಭಾರತ ಹಾಗೂ ಅಮೆರಿಕದ ನೌಕಾಪಡೆಗಳು ವರ್ಷದುದ್ದಕ್ಕೂ ಸಮರಾಭ್ಯಾಸಗಳು ನಡೆಸುತ್ತಾ ಇರುತ್ತದೆ.

ಏನಿದು ಎಫ್‌ಎನ್‌ಓಪಿ

ವಿವಿಧ ದೇಶಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾಗರಪ್ರದೇಶಗಳ ಮೇಲೆ ಅತಿರೇಕದ ಹಕ್ಕುಸ್ಥಾಪನೆಯನ್ನು ಮಾಡುವುದನ್ನು ಪ್ರಶ್ನಿಸಲು ಅಮೆರಿಕ ನೌಕಾಪಡೆ ಹಾಗೂ ವಾಯುಪಡೆಯು ಅಂತಾರಾಷ್ಟ್ರೀಯವಾಗಿ ಮಾನ್ಯತೆಯುಳ್ಳ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಮರುಸ್ಥಾಪಿಸಲು ನಡೆಸುವ ಕಾರ್ಯಾಚರಣೆಯನ್ನು ನೌಕಾಯಾನ ಕಾರ್ಯಾಚರಣೆಯ ಸ್ವಾತಂತ್ರ್ಯ (ಎಫ್‌ಎನ್‌ಓಪಿ) ಎಂದು ಕರೆಯಲಾಗುತ್ತದೆ.

 ಲಕ್ಷ ದ್ವೀಪದ ಸಾಗರಪ್ರದೇಶದಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ತನ್ನ ಅನುಮತಿಯಿಲ್ಲದೆ ಯಾವುದೇ ಮಿಲಿಟರಿ ಚಟುವಟಿಕೆ ನಡೆಸುವುದನ್ನು ಭಾರತ ನಿರ್ಬಂಧಿಸಿದೆ. ಆದರೆ ಅದನ್ನು ಉಲ್ಲಂಘಿಸಿ ಅಮೆರಿಕದ ನೌಕಾಪಡೆಯು ಎ.7ರಂದು ಆ ಪ್ರದೇಶದಲ್ಲಿ ಕ್ಷಿಪಣಿ ವಿಧ್ವಂಸಕ ನೌಕೆ ಹಾದುಹೋಗಿರುವುದು ಹೊಸ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News