ಪಶ್ಚಿಮಬಂಗಾಳ: ನಾಲ್ಕನೇ ಹಂತದ ಮತದಾನ ಆರಂಭ

Update: 2021-04-10 05:18 GMT

ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಶನಿವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಬೆಳಗ್ಗೆ 9:30ರ ಸುಮಾರಿಗೆ ಶೇ.15.85ರಷ್ಟು ಮತದಾನವಾಗಿದೆ.

ದಕ್ಷಿಣ ಬಂಗಾಳದ ಹೌರ್ಹಾ(ಪಾರ್ಟ್ 2),ದಕ್ಷಿಣ 24 ಪರಗಣ(ಭಾಗ 3), ಹೂಗ್ಲಿ(ಭಾಗ-2), ಉತ್ತರ ಬಂಗಾಳದ ಅಲಿಪುರ್‍ದುಯಾರ್ ಹಾಗೂ ಕೂಚ್ ಬಿಹಾರ ಗಳಲ್ಲಿ ಹರಡಿಕೊಂಡಿರುವ 44 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯತ್ತಿದ್ದು, 373 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಒಟ್ಟು 1,15,81,022 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ಪಶ್ಚಿಮಬಂಗಾಳ ಸಚಿವರಾದ ಪಾರ್ಥ ಚಟರ್ಜಿ, ಅರೂಪ್ ಬಿಸ್ವಾಸ್ ಹಾಗೂ ಭಾರತದ ಮಾಜಿ ಕ್ರಿಕೆಟಿಗ, ಇತ್ತೀಚೆಗೆ ಟಿಎಂಸಿ ಸೇರಿರುವ ಮನೋಜ್ ತಿವಾರಿ ಅವರು ಚುನಾವಣಾ ಕಣದಲ್ಲಿದ್ದಾರೆ.

ಹಿಂಸಾಚಾರದ ನಡುವೆಯೂ ಈ ತನಕ ನಡೆದಿರುವ 3 ಹಂತದ ಚುನಾವಣೆಯಲ್ಲಿ ಶೇ.80ಕ್ಕೂ ಅಧಿಕ ಮತದಾನವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News