ಕೋವಿಡ್-19: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ರಾವ್ ಸಾಹೇಬ್ ಅಂತಪುರ್ಕರ್ ನಿಧನ

Update: 2021-04-10 06:02 GMT

ಮುಂಬೈ: ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ರಾವ್‍ಸಾಹೇಬ್ ಅಂತಪುರ್ಕರ್ ಮುಂಬೈ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗ್ಲೂರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಅಂತಪುರ್ಕರ್ ಆರಂಭದಲ್ಲಿ ದೇಗ್ಲೂರ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಆರೋಗ್ಯ ಹದಗೆಟ್ಟ ಬಳಿಕ ಅವರನ್ನು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕೋವಿಡ್-19 ನಿಂದಾಗಿರುವ ಸಮಸ್ಯೆಯಿಂದಾಗಿ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದಬಂದಿದೆ.

ಅಂತಪುರ್ಕರ್ ಕೋವಿಡ್-19ನಿಂದಾಗಿ ಮೃತಪಟ್ಟಿರುವ ಮಹಾರಾಷ್ಟ್ರದ ಎರಡನೇ ಶಾಸಕರಾಗಿದ್ದಾರೆ.

ಈ ಹಿಂದೆ ಪಂಧರ್ಪುರ ಎನ್ ಸಿಪಿ ಶಾಸಕ ಭರತ್ ಭಾಲ್ಕೆ ಅವರು ನವೆಂಬರ್ 28ರಂದು ಕೋವಿಡ್ ಸೋಂಕಿನ ಬಳಿಕ ಉಂಟಾದ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News