ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ವಿಭಾಗದ 22 ನೌಕರರ ವರ್ಗಾವಣೆ ಮಾಡಿ ಆದೇಶ

Update: 2021-04-10 14:08 GMT

ಚಿಕ್ಕಮಗಳೂರು, ಎ.10: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಡಿಪೋದಲ್ಲಿ ಚಾಲಕರಾಗಿ ಮತ್ತು ನಿರ್ವಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 22 ನೌಕರರನ್ನು ಪುತ್ತೂರು ಡಿಪೋಗೆ ವರ್ಗಾವಣೆ ಮಾಡಿ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ವಿಭಾಗದ ನೌಕರರಾದ ಸದಾಶಿವ ಮಂಚಲ್ಕರ್, ಎಲ್.ಆರ್.ಛಾಯಾಕುಮಾರಿ, ಡಿ.ಆರ್.ಶ್ರೀನಿವಾಸ್, ಅನಂತನಾಯ್ಕ್, ಆರ್.ಶಾರದಾ, ಎಂ.ಟಿ.ಪವಿತ್ರಾ ಕುಮಾರ್, ಗೋಪಾಲ ಭೋವಿ, ಲೋಹಿತ್, ನಂದೀಶ, ಎ.ಎಂ.ರವಿ, ಗೋಪಾಲ ಕೆ.ನಾಯ್ಕ್, ಎ.ಕೆ.ಸುರೇಶ್, ಶಂಕರಪ್ಪ ಬನ್ನಿಕೊಪ್ಪ, ಸತ್ಯಪ್ಪ ಉಳ್ಳಟ್ಟಿ, ಸಿ.ಜೆ.ಶ್ರೀಧರ್, ಬಿ.ಟಿ.ಸಂದೇಶ, ಎಸ್.ಆರ್.ಪ್ರದೀಪ್‍ಕುಮಾರ್, ಓಂಕಾರನಾಯ್ಕ, ಜೆ.ಎಸ್.ಕಲ್ಲೇಶ, ಡಿ.ಜಿ.ರಂಗನಾಥ್, ಕೆ.ಎಸ್.ಪಂಚಾಕ್ಷರಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ತಾಂತ್ರಿಕ ವಿಭಾಗದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಕಡೂರು ಘಟಕದ ಜಿ.ಶ್ರೀನಿವಾಸ್, ಅರಸೀಕೆರೆ ಘಟಕದ ಜಾರ್ಜ್ ಫಿಲಿಪ್ ಅವರನ್ನು ಚಿಕ್ಕಬಳ್ಳಾಪುರ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನು ಆಡಳಿತ ವಿಭಾಗದ ಸಿಬ್ಬಂದಿ ಆರ್.ಹೇಮಂತ್‍ಕುಮಾರ್ ಅವರನ್ನು ಕೋಲಾರ ವಿಭಾಗಕ್ಕೆ,  ಜಿ.ಪ್ರಸನ್ನ ಅವರನ್ನು ಚಿಕ್ಕಬಳ್ಳಾಪುರ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ನಿಗಮದ ಇತಿಹಾಸದಲ್ಲಿ ಮಹಿಳೆಯರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಇದೇ ಮೊದಲು. ವರ್ಗಾವಣೆಗೊಳಿಸಿ ನಮ್ಮ ಆತ್ಮಸ್ಥೈರ್ಯ ಕುಗ್ಗಿಸಲು ಸರಕಾರ ಮುಂದಾಗಿದೆ. ನಮ್ಮ ಕುಟುಂಬಗಳು ಇಂದು ಬೀದಿಗೆ ಬಂದು ಹೋರಾಟ ಮಾಡುವಂತೆ ಮಾಡಿದೆ. ಸರಕಾರ ನಮ್ಮ ನೋವುಗಳನ್ನು ಅರ್ಥಮಾಡಿಕೊಳ್ಳಬೇಕು, ಕಿರುಕುಳ ನೀಡಬಾರದು
- ವರ್ಗಾವಣೆಗೊಂಡ ಸರಕಾರಿ ಸಾರಿಗೆ ಬಸ್‍ನ ಮಹಿಳಾ ನಿರ್ವಾಹಕಿ

ಮುಷ್ಕರದ ಹಿನ್ನೆಲೆಯಲ್ಲಿ ಸರಕಾರ ನಮ್ಮ ವೇತನವನ್ನು ತಡೆಹಿಡಿದಿದೆ. ಯುಗಾದಿ ಹಬ್ಬವನ್ನು ರಸ್ತೆ ಮೇಲೆ ಆಚರಿಸುತ್ತೇವೆ. 6ನೇ ವೇತನ ಆಯೋಗ ಜಾರಿಯಾಗುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ.
- ವರ್ಗಾವಣೆಗೊಂಡ ಮಹಿಳಾ ಬಸ್ ಕಂಡಕ್ಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News