ಶಿವಮೊಗ್ಗ: ಕೋವಿಶೀಲ್ಡ್‌ ಲಸಿಕೆ ಕೊರತೆ; ಲಸಿಕೆ ಹಾಕಿಸದೆ ಹಿರಿಯ ನಾಗರಿಕರು ವಾಪಸ್‌

Update: 2021-04-15 18:51 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಎ.16: ನಗರದಲ್ಲಿ ಗುರುವಾರ ಆಯುರ್ವೇದ ಕಾಲೇಜಿನಲ್ಲಿ ಕೋವಿಶೀಲ್ಡ್‌ ಲಸಿಕೆ ಇಲ್ಲದ್ದಕ್ಕೆ ಹಿರಿಯ ನಾಗರಿಕರು ವಾಪಸ್‌ ಹೋದ ಘಟನೆ ನಡೆಯಿತು.

ಪ್ರತಿ ದಿನ ಏಳು ಸಾವಿರ ಲಸಿಕೆ ನೀಡಬೇಕಾಗಿದ್ದು, ಜಿಲ್ಲೆಗೆ ಪೂರೈಕೆಯಾಗಿರುವ ಲಸಿಕೆ ಕಡಿಮೆ ಇರುವುದರಿಂದ ಕೊರತೆ ಉಂಟಾಗಿದೆ. ಆದರೆ, ಬೇಡಿಕೆಯನ್ನು ಸಲ್ಲಿಸಲಾಗಿದ್ದು, ಒಂದೆರಡು ದಿನಗಳಲ್ಲಿ 3 ಸಾವಿರ ಲಸಿಕೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಎರಡನೇ ಡೋಸ್‌ಗೆ ಬಂದಿದ್ದ ಸಾಕಷ್ಟು ಜನ ಲಸಿಕೆಯ ಕೊರತೆಯಿಂದಾಗಿ ವಾಪಸ್‌ ಹೋಗಿದ್ದಾರೆ. ಲಸಿಕೆ ಇಲ್ಲದ್ದರಿಂದ ಬೇರೆ ದಿನ ಬರುವಂತೆ ಸೂಚಿಸಿ ಕಳುಹಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 1.66 ಲಕ್ಷ ಕೋವಿಶೀಲ್ಡ್‌ ಹಾಗೂ 16,900 ಕೋವ್ಯಾಕ್ಸಿನ್‌ ನೀಡಲಾಗಿದೆ. ಕೋವ್ಯಾಕ್ಸಿನ್‌ ಇನ್ನೂ 6500 ದಾಸ್ತಾನು ಲಭ್ಯವಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News