"ನಟ ವಿವೇಕ್‌ ಹೃದಯಾಘಾತಕ್ಕೂ ಕೋವಿಡ್‌ ಲಸಿಕೆ ಹಾಕಿಸಿಕೊಂಡದ್ದಕ್ಕೂ ಸಂಬಂಧವಿಲ್ಲ"

Update: 2021-04-16 17:51 GMT
photo: facebook

ಚೆನ್ನೈ: ಶುಕ್ರವಾರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ತಮಿಳು ಹಾಸ್ಯನಟ ವಿವೇಕ್‌ ರವರ ಎಡ ಅಪಧಮನಿಯಲ್ಲಿ ಸಂಪೂರ್ಣ ರಕ್ತ ಹೆಪ್ಪುಗಟ್ಟಿದ್ದು, ಇದು ಕೋವಿಡ್‌ ಲಸಿಕೆ ಪಡೆದುಕೊಂಡಿರುವುದಕ್ಕೆ ಸಂಬಂಧಿಸಿದ್ದಲ್ಲ ಎಂದು ಸಿಮ್ಸ್‌ ಆಸ್ಪತ್ರೆಗಳ ಉಪಾಧ್ಯಕ್ಷ ಡಾ. ರಾಜು ಶಿವಸಾಮಿ ಹೇಳಿಕೆ ನೀಡಿದ್ದಾರೆ. ವಿವೇಕ್‌ ಗುರುವಾರದಂದು ಕೊರೋನ ಲಸಿಕೆ ಕೋವ್ಯಾಕ್ಸಿನ್‌ ಪಡೆದುಕೊಂಡಿದ್ದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಡಾ. ಶಿವಸಾಮಿ, "ನಟ ವಿವೇಕ್‌ ರವರು ʼವೆಂಟಿಕ್ಯುಲರ್‌ ಫೈಬ್ರಿಲೇಶನ್‌ʼ ಎಂಬ ಪ್ರತ್ಯೇಕ ಹೃದಯ ಸಂಬಂಧಿ ಪ್ರಕರಣಕ್ಕೀಡಾಗಿದ್ದು, ಇದರಿಂದಾಗಿ ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ" ಎಂದು ಅವರು ಹೇಳಿದರು.

"ಇದು ವಿವೇಕ್ ರ ಪ್ರಥಮ ಹೃದಯಾಘಾತವಾಗಿದ್ದು, ತೀವ್ರವಾಗಿದೆ. ನಾವು ಆಂಜಿಯೋಗ್ರಾಮ್‌ ಮಾಡಿದ್ದೇವೆ. ಬಳಿಕ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ. ಅವರು ಸದ್ಯ ಇಸಿಎಂಒದಲ್ಲಿ ಅಬ್ಸರ್ವೇಶನ್‌ ನಲ್ಲಿದ್ದಾರೆ. ಸುಧಾರಿಸಲು 24 ಗಂಟೆ ಸಮಯ ಬೇಕಾಗಬಹುದು" ಎಂದು ಡಾ. ಶಿವಸಾಮಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News