ದಿಲ್ಲಿಯಲ್ಲಿ ಐಸಿಯು ಹಾಸಿಗೆಗಳು,ಆಮ್ಲಜನಕದ ತೀವ್ರ ಕೊರತೆ ಕಾಡುತ್ತಿದೆ:ಅರವಿಂದ ಕೇಜ್ರಿವಾಲ್

Update: 2021-04-17 12:16 GMT

ಹೊಸದಿಲ್ಲಿ: ಕೋವಿಡ್ -19 ಪ್ರಕರಣಗಳು ಶೀಘ್ರವಾಗಿ ಹೆಚ್ಚುತ್ತಿರುವ ಕಾರಣ ದಿಲ್ಲಿಯು ಐಸಿಯು ಹಾಸಿಗೆಗಳು ಹಾಗೂ  ವೈದ್ಯಕೀಯ ಆಮ್ಲಜನಕದ ಕೊರತೆ  ಎದುರಿಸುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ದಿಲ್ಲಿಯಲ್ಲಿ ಸೀಮಿತ ಸಂಖ್ಯೆಯ ಐಸಿಯು ಹಾಸಿಗೆಗಳಿವೆ. ವೈದ್ಯಕೀಯ ಆಮ್ಲಜನಕ ಹಾಗೂ ಐಸಿಯು ಹಾಸಿಗೆಗಳು ಬಹಳ ತೀವ್ರವಾಗಿ ಕಡಿಮೆಯಾಗುತ್ತಿವೆ. ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದಿಲ್ಲಿಯಲ್ಲಿ ಸುಮಾರು 24,000 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು ಪ್ರಕರಣದ ಪಾಸಿಟಿವಿಟಿ ಪ್ರಮಾಣವು ಶೇಕಡಾ 24 ದಾಟಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News