ರಾಜ್ಯದಲ್ಲಿಂದು ದಾಖಲೆ ಪ್ರಮಾಣದ ಕೋವಿಡ್ ಪ್ರಕರಣ: 80 ಮಂದಿ ಮೃತ್ಯು, 17 ಸಾವಿರಕ್ಕೂ ಅಧಿಕ ಪಾಸಿಟಿವ್

Update: 2021-04-17 14:44 GMT

ಬೆಂಗಳೂರು, ಎ.17: ರಾಜ್ಯಾದಲ್ಲಿ ಶನಿವಾರ 17,489 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 80 ಮಂದಿ ಮೃತಪಟ್ಟಿದ್ದಾರೆ. ಹಾಗೂ 5,565 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್‍ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆ ಆಗುತ್ತಿದ್ದು ಬೆಂಗಳೂರು ನಗರದಲ್ಲಿಯೇ ಕಳೆದ 24 ಗಂಟೆಯಲ್ಲಿ 43 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬಳ್ಳಾರಿ-2, ಬೀದರ್-2, ಚಾಮರಾಜನಗರ-2, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-1, ದಕ್ಷಿಣ ಕನ್ನಡ-1, ಧಾರವಾಡ-2, ಹಾಸನ-8, ಕಲಬುರಗಿ-3, ಕೋಲಾರ-1, ಮಂಡ್ಯ-1, ಮೈಸೂರು-8, ಶಿವಮೊಗ್ಗ-1, ತುಮಕೂರು-3, ಉತ್ತರ ಕನ್ನಡ-1 ಸಾವಿನ ಪ್ರಕರಣ ವರದಿಯಾಗಿದೆ.

ರಾಜ್ಯದಲ್ಲಿ ಇಲ್ಲಿಯವರೆಗೂ 11,41,998 ಸೋಂಕಿತ ಪ್ರಕರಣ ದೃಢಪಟ್ಟಿದ್ದು, ಒಟ್ಟು 13,270 ಮಂದಿ ಮೃತಪಟ್ಟಿದ್ದಾರೆ. 1,19,160 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ. ಕೇರ್ ಸೆಂಟರ್ ಹಾಗೂ ಮನೆಯಲ್ಲಿದ್ದು, ವೈದ್ಯರ ಸೂಚನೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಸೋಂಕಿತರ ವಿವರ: ಬಾಗಲಕೋಟೆ-50, ಬಳ್ಳಾರಿ-355, ಬೆಳಗಾವಿ-188, ಬೆಂಗಳೂರು ಗ್ರಾಮಾಂತರ-262, ಬೆಂಗಳೂರು ನಗರ-11,404, ಬೀದರ್-359, ಚಾಮರಾಜನಗರ-136, ಚಿಕ್ಕಬಳ್ಳಾಪುರ-179, ಚಿಕ್ಕಮಗಳೂರು-68, ಚಿತ್ರದುರ್ಗ-80, ದಕ್ಷಿಣ ಕನ್ನಡ-309, ದಾವಣಗೆರೆ-122, ಧಾರವಾಡ-272, ಗದಗ-37, ಹಾಸನ-224, ಹಾವೇರಿ-48, ಕಲಬುರಗಿ-560, ಕೊಡಗು-58, ಕೋಲಾರ-144, ಕೊಪ್ಪಳ-121, ಮಂಡ್ಯ-223, ಮೈಸೂರು-811, ರಾಯಚೂರು-91, ರಾಮನಗರ-102, ಶಿವಮೊಗ್ಗ-125, ತುಮಕೂರು-507, ಉಡುಪಿ-118, ಉತ್ತರ ಕನ್ನಡ-102, ವಿಜಯಪುರ-281, ಯಾದಗಿರಿ-153 ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಶನಿವಾರ 11,404 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. ಹಾಗೂ 3,253 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಗರದಲ್ಲಿ ಒಟ್ಟು 87,724 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೇರ್ ಸೆಂಟರ್ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News