ಹೆಲಿ ಟೂರಿಸಂಗಾಗಿ ಮರಗಳ ಹನನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

Update: 2021-04-17 16:46 GMT

ಮೈಸೂರು,ಎ.17: ಲಲಿತ ಮಹಲ್ ಮೈದಾನದಲ್ಲಿ ಹೆಲಿ ಟೂರಿಸಂಗಾಗಿ ಮರಗಳ ಹನನ ವಿರೋಧಿಸಿ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.

ಶನಿವಾರ ಸಂಜೆ ಆರಂಭವಾದ ಸಹಿ ಸಂಗ್ರಹ ಅಭಿಯಾನಕ್ಕೆ ಐನೂರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದರು. ಇದಕ್ಕೂ ಮುನ್ನ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್ ಅವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು.

ಎ.18 ರಂದು ಬೆಳಗ್ಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಯಲಿದೆ. ಇದೇ ರೀತಿ ಅಲ್ಲಲ್ಲಿ ಜನ ಸೇರುವ ಜಾಗಗಳಲ್ಲಿ ಸಹಿ ಸಂಗ್ರಹಿಸಿ ಎ.23 ರಂದು ಅರಣ್ಯ ಭವನದಲ್ಲಿ ನಡೆಯುವ ಅಹವಾಲು ಕಾರ್ಯಕ್ರಮದಲ್ಲಿ ಮರಗಳ ಕಡಿಯುವುದರ ವಿರೋಧವಾಗಿ ಮಂಡಿಸಲಾಗುವುದು.

ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್, ವಕೀಲ ಎನ್.ಪುನೀತ್, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಪರಂಜ್ಯೋತಿ, ಸುರೇಶ್ ಮೌರ್ಯ, ಶಶಿ, ಕವಿ ಪ್ರವೀಣ ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News