ಭಾರತದಲ್ಲಿ ಹದಗೆಟ್ಟ ಕೋವಿಡ್‌ ಪರಿಸ್ಥಿತಿ: 8 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಕೆ ಮಾಡಿದ ಸೌದಿ ಅರೇಬಿಯಾ

Update: 2021-04-25 08:44 GMT

ರಿಯಾದ್:‌ ಭಾರತದಾದ್ಯಂತ ಕೋವಿಡ್‌ ಸೋಂಕಿತರ ಸಂಖ್ಯೆಯು ತೀವ್ರ ಏರಿಯಾಗುತ್ತಿದ್ದು, ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತಿರುವ ಕಾರಣ ಹಲವಾರು ಮಂದಿ ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾವು ಭಾರತಕ್ಕೆ 8 ಮೆಟ್ರಿಕ್‌ ಟನ್‌ ಗಳನ್ನು ಲಿಕ್ವಿಡ್‌ ಆಕ್ಸಿಜನ್‌ ಅನ್ನು ರವಾನಿಸಿದೆ ಎಂದು arab news ವರದಿ ಮಾಡಿದೆ. ಭಾರತದ ಅದಾನಿ ಗುಂಪು ಮತ್ತು ಲಿಂಡೆ ಕಂಪನಿಯ ಸಹಯೋಗದೊಂದಿಗೆ ತುರ್ತು ಪೂರೈಕೆ ಸಾಗಣೆಯನ್ನು ಕೈಗೊಳ್ಳಲಾಗುತ್ತಿದೆ.

ದೇಶದಲ್ಲಿ ಕಳೆದ 2 ಗಂಟೆಯ ಅವಧಿಯಲ್ಲಿ 3,೪೯,೬೯೧ ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು, ಇದು ದಾಖಲೆಯ ಗರಿಷ್ಠ ಸಂಖ್ಯೆಯಾಗಿದೆ. ದಿಲ್ಲಿ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಆಕ್ಸಿಜನ್‌ ಸಮಸ್ಯೆಯನ್ನೂ ಎದುರಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಭಾರತದ ರಾಯಭಾರಿ ಕಚೇರಿಯು ದೇಶಕ್ಕೆ 8೦ ಮೆಟ್ರಿಕ್‌ ಟನ್‌ ಗಳಷ್ಟು ಆಕ್ಸಿಜನ್‌ ರವಾನಿಸುವಲ್ಲಿ ಅದಾನಿ ಗ್ರೂಪ್‌ ಮತ್ತು ಲಿಂಡೆಯೊಂದಿಗಿನ ಪಾಲುದಾರಿಕೆಯ ಕುರಿತು ಹೆಮ್ಮೆಪಡುತ್ತದೆ. ನಮಗೆ ನೀಡಿದ ಬೆಂಬಲ ಮತ್ತು ಸಹಾಯಕ್ಕಾಗಿ ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು" ಎಂದು ರಿಯಾದ್‌ ಮೂಲದ ಭಾರತೀಯ ರಾಯಭಾರಿ ಕಚೇರಿ ತನನ್‌ ಟ್ವೀಟ್‌ ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News