ಚಿಕ್ಕಮಗಳೂರು: ವೀಕೆಂಡ್ ಕರ್ಫ್ಯೂಗೆ ವ್ಯಾಪಕ ಬೆಂಬಲ

Update: 2021-04-25 09:33 GMT

ಚಿಕ್ಕಮಗಳೂರು, ಎ.25: ವಾರಾಂತ್ಯದ ಕರ್ಫ್ಯೂವಿನ 2ನೇ ದಿನವಾದ ರವಿವಾರ ಕಾಫಿನಾಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನ ಸಂಚಾರ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿವೆ.

ರವಿವಾರ ಬೆಳಗ್ಗೆ 6 ಗಂಟೆಯಿಂದ 10ರವರೆಗೂ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ಹೂವು, ದಿನಸಿ ಸೇರಿದಂತೆ ಇತರ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಹಾಲು ಹಣ್ಣು ಖರೀದಿ ಗಿಂತ ಮೀನು, ಮಾಂಸ, ಮೊಟ್ಟೆ ಖರೀದಿಗೆ ಜನರು ಮುಗಿಬಿದಿದ್ದರು.‌ ಕೋಳಿ, ಮೀನು ಮಾಂಸಗಳ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದರು.

10 ಗಂಟೆ ಬಳಿಕ ಪೊಲೀಸರು ಎಲ್ಲಾ ಅಂಗಡಿ ಬಂದ್ ಮಾಡಿಸಿದರು. 11ಗಂಟೆ ವೇಳೆ ಗಿಜುಗುಡುತ್ತಿದ್ದ ಮಾರುಕಟ್ಟೆಗಳೆಲ್ಲ ಸ್ತಬ್ಧಗೊಂಡವು. ಕೆಎಸ್ಸಾರ್ಟಿಸಿ ಬಸ್ ಸಂಚಾರ ವಿದ್ದರು ಪ್ರಯಾಣಿಕರು ನಿಲ್ದಾಣದ ಕಡೆ ಸುಳಿಯಲಿಲ್ಲ.

ಆಟೋ ಟ್ಯಾಕ್ಸಿ ವಾಹನಗಳು 10 ಗಂಟೆಯ ವರೆಗೂ ಸಂಚಾರ ನಡೆಸಿದವು.  

ಔಷಧಿ ಅಂಗಡಿ , ಪೊಟ್ರೋಲ್ ಬಂಕ್, ಆಸ್ಪತ್ರೆ ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲೆ ಲಾಕ್ ಆಗುವ ಮೂಲಕ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News