2022ರಲ್ಲಿ 300 ಕೋಟಿ ಡೋಸ್ ಲಸಿಕೆ ಉತ್ಪಾದನೆ: ಮೋಡರ್ನಾ

Update: 2021-04-29 16:26 GMT

ವಾಶಿಂಗ್ಟನ್, ಎ. 29: ತನ್ನ ಕೋವಿಡ್-19 ಲಸಿಕೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, 2022ರಲ್ಲಿ 300 ಕೋಟಿಯಷ್ಟು ಡೋಸ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೋಡರ್ನಾ ಇಂಕ್ ಗುರುವಾರ ಹೇಳಿದೆ. ಇದು ಕಂಪೆನಿಯ ಹಿಂದಿನ ನಿರೀಕ್ಷೆಯ ದುಪ್ಪಟ್ಟಿಗಿಂತಲೂ ಅಧಿಕವಾಗಿದೆ.

ಅದೂ ಅಲ್ಲದೆ, 2021ರ ಸಾಲಿನ ತನ್ನ ಲಸಿಕೆ ಉತ್ಪಾದನೆಯ ಗುರಿಯನ್ನು 80 ಕೋಟಿಯಿಂದ 100 ಕೋಟಿ ಡೋಸ್‌ಗಳವರೆಗೆ ಹೆಚ್ಚಿಸುತ್ತಿರುವುದಾಗಿಯೂ ಅದು ಹೇಳಿದೆ. ಇದಕ್ಕೂ ಮೊದಲು ಕನಿಷ್ಠ 70 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಗುರಿಯನ್ನು ಅದು ಹಾಕಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News