ಭದ್ರಾವತಿ ನಗರಸಭೆ ಚುನಾವಣೆ: ಕಾಂಗ್ರೆಸ್ ಗೆ ಜಯ

Update: 2021-04-30 07:25 GMT

ಶಿವಮೊಗ್ಗ : ತೀವ್ರ ಕುತೂಹಲ ಕೆರಳಿಸಿದ್ದ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ.

34 ವಾರ್ಡ್‌ಗಳಲ್ಲಿ ಕಾಂಗ್ರೆಸ್ 18, ಜೆಡಿಎಸ್ 11 ಹಾಗೂ ಬಿಜೆಪಿ 4, ಪಕ್ಷೇತರ 1ಸ್ಥಾನಗಳಿಸಿದೆ. ಈ ಮೂಲಕ ಕಾಂಗ್ರೆಸ್ 18ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತಗಳಿಸಿದೆ.

ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರಿಂದ ಹಿಡಿದು ಹಲವು ನಿಗಮಂಡಳಿಗಳ ಅಧ್ಯಕ್ಷರು  ಭದ್ರಾವತಿ ಯಲ್ಲಿ ಠಿಕಾಣಿ ಹೂಡಿ ನಗರಸಭೆ ಚುಕ್ಕಾಣಿ ಹಿಡಿಯಬೇಕು ಎಂದು ಭರ್ಜರಿ ಪ್ರಚಾರ ನಡೆಸಿದ್ದರು.

ಕಳೆದ ಬಾರಿ 23 ಸ್ಥಾನಗಳಿಸಿದ್ದ ಜೆಡಿಎಸ್‌ಗೆ ಈ ಬಾರಿ ನಾಯಕತ್ವದ ಕೊರತೆ ಕಾಡಿದೆ. ಅಪ್ಪಾಜಿ ಗೌಡ ನಿಧನ ನಂತರ ಸಮರ್ಥ ನಾಯಕತ್ವ ಇಲ್ಲದೇ ಈ ಬಾರಿ ನಗರಸಭೆ ಚುನಾವಣೆ ನಡೆಸಿದ್ದ ಜೆಡಿಎಸ್ ಈ ಸಲ 11 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News