ಚುನಾವಣಾ ಫಲಿತಾಂಶದ ವರದಿಯ ವೇಳೆ ಮತಗಳನ್ನು ಆಕ್ಸಿಜನ್ ಗೆ ಹೋಲಿಸಿದ ಎಬಿಪಿ ನ್ಯೂಸ್

Update: 2021-05-02 14:18 GMT
Photo source: twitter

ಹೊಸದಿಲ್ಲಿ: ಟೆಲಿವಿಷನ್ ಚಾನೆಲ್ ಎಬಿಪಿ ನ್ಯೂಸ್ ರವಿವಾರ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪ್ರಸಾರದ ವೇಳೆ  ಭಾರತದಲ್ಲಿ ಕೊರೋನ ಸಂಕಷ್ಟದಲ್ಲಿ ಎದುರಾಗಿರುವ ಆಮ್ಲಜನಕದ ಕೊರತೆಯನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳಿಗೆ ಹೋಲಿಸಿದೆ. ಈ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಚುನಾವಣೆಯಲ್ಲಿ ಸ್ಥಾನಗಳೆಂಬ ಆಮ್ಲಜನಕವನ್ನು ಯಾರು ಪಡೆದರು? ಈ ಗ್ರಾಫಿಕ್ಸ್ ಮೂಲಕ ನಾವು ವಿವರಿಸುತ್ತೇವೆ ಎಂದು ಆ್ಯಂಕರ್  ಹೇಳುತ್ತಾರೆ. ಆಗ ಪರದೆಯ ಮೇಲೆ ವಿಮಾನದಿಂದ ಆಕ್ಸಿಜನ್ ಟ್ರಕ್ ವೊಂದು  ಹೊರಬರುತ್ತದೆ.

"ಈ ಟ್ಯಾಂಕರ್ನಿಂದ ಬಿಜೆಪಿಗೆ ಹೆಚ್ಚಿನ ಆಮ್ಲಜನಕ ಸಿಗಲಿಲ್ಲ ಹಾಗೂ ಕಾಂಗ್ರೆಸ್ ವೆಂಟಿಲೇಟರ್ನಲ್ಲಿದೆ ಎಂದು ಕಾಣುತ್ತಿದೆ" ಎಂದು ನಿರೂಪಕಿ  ಪ್ರತಿಕ್ರಿಯಿಸಿದ್ದಾರೆ.

ಆಮ್ಲಜನಕ ಬಿಕ್ಕಟ್ಟನ್ನು ಚುನಾವಣಾ ಫಲಿತಾಂಶದೊಂದಿಗೆ ಹೋಲಿಕೆ ಮಾಡಲು ಬಳಸಿಕೊಂಡಿರುವುದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು  ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News