​ಪ್ರಧಾನಿ ಹೊಸ ಮನೆಗೆ 13,000 ಕೋ. ರೂ. ವ್ಯಯಿಸುವ ಬದಲಿಗೆ ಕೋವಿಡ್ ಪರಿಹಾರದತ್ತ ಕೇಂದ್ರ ಗಮನ ನೀಡಲಿ:ಪ್ರಿಯಾಂಕಾ ಗಾಂಧಿ

Update: 2021-05-04 11:29 GMT

ಹೊಸದಿಲ್ಲಿ: ಪ್ರಧಾನ ಮಂತ್ರಿಯವರಿಗೆ ಹೊಸ ಮನೆ ನಿರ್ಮಿಸಲು ಕೇಂದ್ರದ ಸಂಪನ್ಮೂಲಗಳನ್ನು ಬಳಸಲಾಗುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದೇಶ ಆಕ್ಸಿಜನ್ ಕೊರತೆ, ಲಸಿಕೆ ಹಾಗೂ ಆಸ್ಪತ್ರೆಗಳ ಬೆಡ್ ಕೊರತೆಯಿಂದ ಬಳಲುತ್ತಿರುವ ಸಮಯದಲ್ಲಿ ಸರಕಾರವು ತನ್ನ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಇಂದು ಬೆಳಗ್ಗೆ ಟ್ವೀಟ್ ಮಾಡಿದ ಪ್ರಿಯಾಂಕಾ, ದೇಶದ ಜನರು ಆಮ್ಲಜನಕ, ಲಸಿಕೆಗಳು, ಆಸ್ಪತ್ರೆಯ ಹಾಸಿಗೆಗಳು, ಔಷಧಿಗಳ ಕೊರತೆಯಿಂದ ಬಳಲುತ್ತಿರುವಾಗ 13,000 ಕೋಟಿ ವೆಚ್ಚ ಮಾಡಿ ಹೊಸ ಮನೆ ನಿರ್ಮಿಸುವ ಬದಲು ಕೇಂದ್ರ ಸರಕಾರವು ಎಲ್ಲಾ ಸಂಪನ್ಮೂಲಗಳನ್ನು ಜೀವ ಉಳಿಸುವ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿರುವ ಪ್ರಧಾನಿಯ ಹೊಸ ಮನೆಯನ್ನು ಉಲ್ಲೇಖಿಸಿ ಪ್ರಿಯಾಂಕಾ ಟ್ವೀಟಿಸಿದ್ದಾರೆ. ಯೋಜನೆಯ ಅಂದಾಜು ಯೋಜನಾ ವೆಚ್ಚ 13,450 ಕೋ.ರೂ. ಆಗಿದ್ದು, 2022ರ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News