ಬಿಜೆಪಿಗೆ ಈಗ ರಾಜಕೀಯ ಆಮ್ಲಜನಕದ ಅಗತ್ಯವಿದೆ: ಮಮತಾ ಬ್ಯಾನರ್ಜಿ

Update: 2021-05-04 13:10 GMT

ಕೋಲ್ಕತಾ: ಬಂಗಾಳ ಚುನಾವಣಾ ಫಲಿತಾಂಶಗಳು ಬಿಜೆಪಿಯನ್ನು ಸೋಲಿಸಬಹುದೆಂದು ಸಾಬೀತುಪಡಿಸಿದೆ ಹಾಗೂ  ಜನರು ಆ ಪಕ್ಷಕ್ಕೆ ದಾರಿ ತೋರಿಸಿದ್ದಾರೆ. ಬಿಜೆಪಿಗೆ ಈಗ ರಾಜಕೀಯ ಆಮ್ಲಜನಕ ಬೇಕಾಗಿದೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು NDTVಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

"ಬಿಜೆಪಿಯನ್ನು ಸೋಲಿಸಬಹುದು. ಇದು ಜನರ ಆಯ್ಕೆಯಾಗಿದೆ. ಜನರು ಆ ಪಕ್ಷಕ್ಕೆ ದಾರಿ ತೋರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನೀವು ಧೈರ್ಯ ಅಥವಾ ಅಹಂಕಾರವನ್ನು ತೋರಿಸಬಾರದು" ಎಂದು ಮಮತಾ ಹೇಳಿದರು.

ರಾಜ್ಯದ ಕೆಲವು ಭಾಗಗಳಲ್ಲಿ ನಡೆದ ಮತದಾನೋತ್ತರ ಹಿಂಸಾಚಾರದ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ,"ತಾವು ಗೆದ್ದ ಪ್ರದೇಶಗಳಲ್ಲಿ ಬಿಜೆಪಿ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ'' ಎಂದು ಆರೋಪಿಸಿದರು.

"ಇದು ಬಿಜೆಪಿಯ ಪ್ರಚಾರ ತಂತ್ರ. ಕೆಲವು ವಿರಳ ಘಟನೆಗಳು ನಡೆಯುತ್ತಿವೆ, ಆದರೆ ಇದು ಪ್ರತಿಯೊಂದು ರಾಜ್ಯದಲ್ಲೂ ನಡೆಯುತ್ತದೆ. ನಾನು ಹಿಂಸಾಚಾರವನ್ನು ಸಮರ್ಥಿಸುತ್ತಿಲ್ಲ. ನಾಚಿಕೆಗೇಡಿನ ಸೋಲಿನಿಂದಾಗಿ ಬಿಜೆಪಿ ಕೋಮು ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News