ಕೊರೋನ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಮುಸ್ಲಿಂ ಸಂಘಟನೆಗಳ ಕೈವಾಡದ ಬಗ್ಗೆ ತನಗೆ ಅನುಮಾನವಿದೆ : ಸಚಿವ ಈಶ್ವರಪ್ಪ

Update: 2021-05-05 06:03 GMT

ಶಿವಮೊಗ್ಗ, ಮೇ 5: ಕೊರೋನ ಬೆಡ್ ಬ್ಲಾಕಿಂಗ್ ದಂಧೆಯ ಹಿಂದೆ ಯಾವುದೋ ಮುಸ್ಲಿಂ ಸಂಘಟನೆಗಳ ಕೈವಾಡದ ಬಗ್ಗೆ ತನಗೆ ಅನುಮಾನ ಬರುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಡ್ ಗಳನ್ನು ಅಕ್ರಮವಾಗಿ ಬ್ಲಾಕ್  ಮಾಡಿಕೊಂಡಿರುವವರಲ್ಲಿ  ಅತಿ ಹೆಚ್ಚು ಮುಸ್ಲಿಮರಿದ್ದಾರೆ. ನಾನಿಲ್ಲಿ ಯಾಕೆ ಧರ್ಮವನ್ನು ಎಳೆದು ತರುತ್ತಿರುವುದೆಂದರೆ ರಾಜ್ಯದಲ್ಲಿ ನಾವು ಹಾಗೋ ಹೀಗೋ  ಕೋವಿಡ್ ನಿಯಂತ್ರಣ ಮಾಡುತ್ತಿದ್ದೇವೆ. ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ವ್ಯಕ್ತಿಗಳು ಈ ರೀತಿ ಮಾಡುತ್ತಿರಬಹುದು ಎಂದ ಅನುಮಾನ ಮೂಡುತ್ತಿದೆ ಎಂದು ಎಂದು ಹೇಳಿದ್ದಾರೆ.

ಈ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ ಸೇರಿದಂತೆ ಕೆಲವರು ಬಯಲು ಮಾಡಿದ್ದಾರೆ. ತನಿಖೆಯ ನಂತರ ಇದರ ಹಿಂದೆ ಯಾರಿದ್ದಾರೆ ಎಂಬುದು ಹೊರಗೆ ಬರಲಿದೆ. ಇದರಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಕೈವಾಡವಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News