ಹೆಚ್ಚುತ್ತಿರುವ ಕೋವಿಡ್: ಉಪ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ

Update: 2021-05-05 16:30 GMT

ಹೊಸದಿಲ್ಲಿ, ಮೇ 5: ಕೊರೋನ ಸಾಂಕ್ರಾಮಿಕ ರೋಗದ ನಡುವೆ ಚುನಾವಣೆ ನಡೆಸಿರುವ ಬಗ್ಗೆ ಟೀಕೆಗೆ ಒಳಗಾಗಿರುವ ಚುನಾವಣಾ ಆಯೋಗ 3 ಲೋಕಸಭಾ ಹಾಗೂ 8 ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ. 

‘‘ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಿದೆ. ದೇಶಾದ್ಯಂತ ಕೊರೋನದ ಎರಡನೇ ಅಲೆಯಿಂದ ಉಂಟಾದ ಪರಿಸ್ಥಿತಿ ಸುಧಾರಿಸುವ ವರೆಗೆ ಉಪ ಚುನಾವಣೆ ನಡೆಸದಿರಲು ನಿರ್ಧರಿಸಿದೆ’’ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ. ‌

ಕೊರೋನ ಸಾಂಕ್ರಾಮಿಕ ರೋಗದ ಸಂದರ್ಭ ಚುನಾವಣಾ ಪ್ರಚಾರ ನಡೆಸಿರುವ ಬಗ್ಗೆ ಜಾಗತಿಕ ಟೀಕೆ ವ್ಯಕ್ತವಾಗುತ್ತಿರುವ ನಡುವೆ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಇಂದು ಬೆಳಗ್ಗೆ ‘‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ನಿಮಗೆ ಭಾರತದಂತಹ ರಾಷ್ಟ್ರದಲ್ಲಿ ಚುನಾವಣೆ ನಿಲ್ಲಿಸಲಾಗದು’’ ಎಂದು ಹೇಳಿದ್ದಾರೆ. ಕೊರೋನದ ಎರಡನೇ ಅಲೆಗೆ ಚುನಾವಣಾ ಆಯೋಗ ಏಕೈಕ ಕಾರಣವಾಗಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಇತ್ತೀಚೆಗೆ ಹೇಳಿತ್ತು. ಈ ಟೀಕೆಯ ವಿರುದ್ಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News