ಕೋವಿಡ್19: ರಾಜ್ಯದಲ್ಲಿ ಮೊದಲ ಬಾರಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ

Update: 2021-05-05 17:04 GMT

ಬೆಂಗಳೂರು, ಮೇ 5: ರಾಜ್ಯದಲ್ಲಿ ಬುಧವಾರ ಹೊಸ ಸೋಂಕಿತ ಪ್ರಕರಣಗಳು 50 ಸಾವಿರ ಗಡಿ ದಾಟಿದ್ದು, ಕೋವಿಡ್ ಸಾವಿನ ಪ್ರಕರಣಗಳು ದಿನೇ ದಿನೇ ದ್ವಿಗುಣಗೊಳ್ಳುತ್ತಾ ಸಾಗಿರುವುದು ಜನತೆಯನ್ನು ಆತಂಕಕ್ಕೆ ದೂಡಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 50,112 ಹೊಸ ಪ್ರಕರಣಗಳು ದೃಢವಾಗಿದ್ದು, 346 ಮಂದಿ ಸಾವನ್ನಪ್ಪಿದ್ದಾರೆ. 26,841 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟು ರಾಜ್ಯಾದ್ಯಂತ 4,87,288 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

346 ಮಂದಿ ಸಾವು: ಬಾಗಲಕೋಟೆ 3, ಬಳ್ಳಾರಿ 19, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 5, ಬೆಂಗಳೂರು ನಗರ 161, ಬೀದರ್ 8, ಚಾಮರಾಜನಗರ 5, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣ ಕನ್ನಡ 4, ದಾವಣಗೆರೆ 2, ಧಾರವಾಡ 8, ಗದಗ 3, ಹಾಸನ 11 ಹಾವೇರಿ 4, ಕಲಬುರಗಿ 15, ಕೋಲಾರ 5, ಮಂಡ್ಯ 19, ಮೈಸೂರು 10, ರಾಯಚೂರು 3, ರಾಮನಗರ 2, ಶಿವಮೊಗ್ಗ 15, ತುಮಕೂರು 12, ಉಡುಪಿ 3, ಉತ್ತರಕನ್ನಡ 15 ವಿಜಯಪುರ 4 ಸಾವಿನ ಪ್ರಕರಣಗಳು ವರದಿಯಾಗಿದೆ.

ಸೋಂಕಿತ ಪ್ರಕರಣಗಳು: ರಾಜ್ಯದಲ್ಲಿ ಬುಧವಾರ 50,112 ಸೋಂಕಿತ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 719, ಬಳ್ಳಾರಿ 927, ಬೆಳಗಾವಿ 920, ಬೆಂಗಳೂರು ಗ್ರಾಮಾಂತರ 1,033, ಬೆಂಗಳೂರು ನಗರ 23,106 ಬೀದರ್ 482 ಚಾಮರಾಜನಗರ 542, ಚಿಕ್ಕಬಳ್ಳಾಪುರ 830, ಚಿಕ್ಕಮಗಳೂರು 1009, ಚಿತ್ರದುರ್ಗ 152, ದಕ್ಷಿಣ ಕನ್ನಡ 1,529, ದಾವಣಗೆರೆ 548, ಧಾರವಾಡ 1030, ಗದಗ 189, ಹಾಸನ 1,604, ಹಾವೇರಿ 224, ಕಲಬುರಗಿ 1,097, ಕೊಡಗು 768, ಕೋಲಾರ 1,115, ಕೊಪ್ಪಳ 182, ಮಂಡ್ಯ 1,621, ಮೈಸೂರು 2,790, ರಾಯಚೂರು 427, ರಾಮನಗರ 475, ಶಿವಮೊಗ್ಗ 702, ತುಮಕೂರು 2,335, ಉಡುಪಿ 1,655, ಉತ್ತರಕನ್ನಡ 849, ವಿಜಯಪುರ 513, ಯಾದಗಿರಿ ಜಿಲ್ಲೆಯಲ್ಲಿ 739 ಪ್ರಕರಣಗಳು ಪತ್ತೆಯಾಗಿವೆ.

ರಾಜಧಾನಿಯಲ್ಲಿ 161 ಮಂದಿ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 23,106 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, 161 ಸೋಂಕಿತರು ಮೃತಪಟ್ಟಿದ್ದಾರೆ. 11,343 ಮಂದಿ ಗುಣಮುಖರಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 8,63,380 ಕೊರೋನ ಸೋಂಕಿತರು ದೃಢಪಟ್ಟಿದ್ದು, 7006ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸೇರಿದಂತೆ ಒಟ್ಟು 3,13,314 ಪ್ರಕರಣಗಳಿದ್ದು, ಅವರೆಲ್ಲರೂ ಕೋವಿಡ್ ನಿಗದಿತ ಆಸ್ಪತ್ರೆಗಳು, ಆರೈಕೆ ಕೇಂದ್ರ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News