ಕೋವಿಡ್ ಪರಿಹಾರ ಕಾರ್ಯಗಳಿಗೆ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾರಿಂದ ಅಭಿಯಾನ

Update: 2021-05-07 07:46 GMT

ಹೊಸದಿಲ್ಲಿ: ಭಾರತದ ಕ್ರಿಕೆಟ್ ತಂಡದ  ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಭಾರತದ ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ಅಭಿಯಾನವನ್ನು ಘೋಷಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ, ಕೊಹ್ಲಿ ಮತ್ತು ಅನುಷ್ಕಾ ಅವರು ಭಾರತದ ಕೋವಿಡ್-19 ಪರಿಸ್ಥಿತಿಯ ಕುರಿತು  ಕಳವಳ ವ್ಯಕ್ತಪಡಿಸಿದರು ಮತ್ತು ಪರಿಹಾರ ಕಾರ್ಯಗಳಿಗಾಗಿ ತಾವು ಆಯೋಜಿಸಿರುವ ನಿಧಿಸಂಗ್ರಹಗಾರರ ವಿವರಗಳನ್ನು ಹಂಚಿಕೊಂಡಿದ್ದಾರೆ.

"ಕೋವಿಡ್ -19 ಏರಿಕೆಯಿಂದಾಗಿ  ನಮ್ಮ ದೇಶವು ಕಠಿಣ ಸಮಯವನ್ನು ಎದುರಿಸುತ್ತಿದೆ.  ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಪ್ರಶ್ನಿಸಲಾಗುತ್ತಿದೆ, ನಾವು ಒಗ್ಗೂಡಿ ನಮ್ಮ ಭಾರತಕ್ಕೆ ಸಹಾಯ ಮಾಡಬೇಕಾಗಿದೆ" ಎಂದು ಕೊಹ್ಲಿ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

"ಅನುಷ್ಕಾ ಮತ್ತು ನಾನು ಕೋವಿಡ್ -19 ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಕೆಟ್ಟೊದಲ್ಲಿ ಅಭಿಯಾನವನ್ನು ಆರಂಭಿಸಿದ್ದೇವೆ ಮತ್ತು ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಜೀವ ಉಳಿಸಲು ಯಾವುದೇ ಮೊತ್ತವು ತುಂಬಾ ಚಿಕ್ಕದಲ್ಲ" ಎಂದು ಕೊಹ್ಲಿ ಬರೆದಿದ್ದಾರೆ.

ನಾವು ಒಟ್ಟಿಗೆ ಇದ್ದರೆ ಕೋವಿಡ್ -19 ವಿರುದ್ಧದ ಯುದ್ಧವನ್ನು ಗೆಲ್ಲಬಹುದು ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ ಕೊಹ್ಲಿ ಮತ್ತು ಅನುಷ್ಕಾ ನಮ್ಮ ಆಂದೋಲನಕ್ಕೆ ಸೇರಲು ಒತ್ತಾಯಿಸಿದರು.

ಕೋವಿಡ್-19 ವಿರುದ್ಧದ ದೇಶದ ಹೋರಾಟದಲ್ಲಿ ತಾನು ಮತ್ತು ತನ್ನ  ಪತಿ ಕೊಹ್ಲಿ ಚಳುವಳಿ ಯನ್ನು ಆರಂಭಿಸುವುದಾಗಿ ಈ ಹಿಂದೆ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯೇಕ ಪೋಸ್ಟ್ ನಲ್ಲಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News