ರಾಜಸ್ಥಾನ, ಮಧ್ಯಪ್ರದೇಶದಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ದರ

Update: 2021-05-07 07:31 GMT

ಹೊಸದಿಲ್ಲಿ: ಐದು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬೆಲೆ ಪರಿಷ್ಕರಣೆಗೆ ವಿರಾಮ ಹಾಕಿದ್ದ ತೈಲ ಕಂಪೆನಿಗಳು ಇದೀಗ ಸತತ 4ನೇ ದಿನ ತೈಲ ಬೆಲೆಗಳನ್ನು ಏರಿಸಲಾಗಿದ್ದು, ಶುಕ್ರವಾರ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ.

ಸರಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 29 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 31 ಪೈಸೆ ಹೆಚ್ಚಿಸಲಾಗಿದೆ.

ಈ ಮೂಲಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91.27 ರೂ. ಹಾಗೂ ಡೀಸೆಲ್ ಬೆಲೆ 81.73 ರೂ.  ಆಗಿದೆ.

ರಾಜಸ್ಥಾನದ ಗಂಗನಗರ ಜಿಲ್ಲೆಯಲ್ಲಿ ಪೆಟ್ರೋಲ್ ಲೀಟರ್ ಗೆ 102.15 ರೂ.ಮುಟ್ಟಿದೆ ಎಂದು ತೈಲ ಕಂಪೆನಿಗಳ ಬೆಲೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಧ್ಯಪ್ರದೇಶದ ಅನುಪ್ಪೂರ್ ನಲ್ಲಿ ಈಗ ಪೆಟ್ರೋಲ್ ಬೆಲೆ ರೂ.101.86. ,ಮಹಾರಾಷ್ಟ್ರದ ಪರ್ಬಾನಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.95 ರೂ. ಆಗಿದೆ.

ಈ ವರ್ಷ 2ನೇ ಬಾರಿಗೆ ದೇಶದ ಕೆಲ ಭಾಗಗಳಲ್ಲಿ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಮೊದಲ ಬಾರಿ ನೂರರ ಗಡಿ ದಾಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News