ಪ್ರಧಾನಿ ನನ್ನ ಮಾತನ್ನು ಕೇಳದೆ, ತಮ್ಮ ಮನ್‌ ಕಿ ಬಾತ್‌ ಮಾತ್ರ ಹೇಳಿದರು: ಫೋನ್ ಕರೆಯ ಬಳಿಕ ಜಾರ್ಖಂಡ್‌ ಸಿಎಂ ಹೇಳಿಕೆ

Update: 2021-05-07 08:28 GMT

ರಾಯ್ಪುರ: ಪ್ರಧಾನಮಂತ್ರಿ ಅವರು ಗುರುವಾರ ರಾತ್ರಿ ದೂರವಾಣಿ ಮೂಲಕ ನನ್ನೊಂದಿಗೆ ನಡೆಸಿದ ಸಂಭಾಷಣೆಯ ಸಮಯದಲ್ಲಿ ಅವರು ನನ್ನ ಮಾತನ್ನು ಕೇಳಲಿಲ್ಲ ಅವರು ತಮ್ಮ ಮನ್ ಕಿ ಬಾತ್(ಸ್ವಗತ) ಹೇಳುತ್ತಿದ್ದಾರೆ  ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆರೋಪಿಸಿದ್ದಾರೆ.  

ಪ್ರಧಾನಿ ಅವರು ಜಾರ್ಖಂಡ್ ರಾಜ್ಯದ ಕೋವಿಡ್ ಪರಿಸ್ಥಿತಿಯ ಕುರಿತು ಮಾತನಾಡಿದ ಗಂಟೆಗಳ ಬಳಿಕ ಸೊರೆನ್ ಈ ಹೇಳಿಕೆ ನೀಡಿದ್ದಾರೆ. 

ಮೂಲಗಳ ಪ್ರಕಾರ, ಪ್ರಧಾನಿ ಅವರು  ಕೋವಿಡ್ ಸಂಬಂಧಿತ ಪರಿಸ್ಥಿತಿಯ ಬಗ್ಗೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ. ಅವರು ಪುದುಚೇರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ರೊಂದಿಗೆ  ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸೊರೆನ್ ಗುರುವಾರ ರಾತ್ರಿ  ಟ್ವೀಟ್ ಮಾಡುತ್ತಾ, “ಆದರ್ನಿಯಾ ಪ್ರಧಾನ್ ಮಂತ್ರಿಜಿ ನೆ ಫೋನ್ ಕಿಯಾ. ಉನ್ಹೋನೆ  ಸಿರ್ಫ್ ಅಪ್ನೆ ಮನ್ ಕಿ ಬಾತ್ ಕಿ ಬೆಹ್ತಾರ್ ಹೋತಾ ಅಗರ್ ವೋ ಕಾಮ್ ಕಿ ಬಾತ್ ಕರ್ತೆ ಔರ್ ಕಾಮ್ ಕಿ ಬಾತ್ ಸುನ್ತೆ (ಗೌರವಾನ್ವಿತ ಪ್ರಧಾನ ಮಂತ್ರಿ ಕರೆ ಮಾಡಿದ್ದರು. ಅವರು ತಮ್ಮ ಮನಸ್ಸಿನಲ್ಲಿದ್ದದ್ದನ್ನು ಮಾತನಾಡಿದ್ದಾರೆ. ಅವರು ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಮಾತನಾಡಿದ್ದರೆ ಹಾಗೂ ವಿಷಯದ ಬಗ್ಗೆ ಆಲಿಸಿದ್ದರೆ ಚೆನ್ನಾಗಿರುತ್ತಿತ್ತು)” ಎಂದಿದ್ದಾರೆ.

 “ಪ್ರಧಾನಿ ಮೋದಿ ಅವರು ರಾಜ್ಯದ ಸ್ಥಿತಿ ಮತ್ತು ಸಂಪನ್ಮೂಲಗಳ ಬಗ್ಗೆ ಮತ್ತು ಎಲ್ಲಾ ರಾಜ್ಯಕ್ಕೆ ಏನು ಬೇಕು ಎಂದು ಕೇಳಲಿಲ್ಲ. ಅಗತ್ಯವಾದ ಔಷಧಿಗಳನ್ನು ಪಡೆಯಲು ರಾಜ್ಯವು ಹೆಣಗಾಡುತ್ತಿದೆ.  ಆದಾಗ್ಯೂ ಅವರು ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದು ಜಾರ್ಖಂಡ್ ಸಿಎಂ ಈ ಟ್ವೀಟ್ ಬರೆಯಲು ಕಾರಣವಾಯಿತು, ”ಎಂದು  ಮೂಲಗಳು ತಿಳಿಸಿವೆ. 

ವಲಸೆ ಕಾರ್ಮಿಕರು ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಿಭಾಯಿಸಿರುವ ಬಗ್ಗೆ ಮುಖ್ಯಮಂತ್ರಿ ಈ ಹಿಂದೆ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ಕೇಂದ್ರ ಸರಕಾರವು ಜಾರ್ಖಂಡ್ ಅನ್ನು ಕಡೆಗಣಿಸಲು ಇದು ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News