ಕಾಳಸಂತೆಯಲ್ಲಿ ರೆಮಿಡೆಸ್ವಿರ್ ಮಾರಾಟಕ್ಕೆ ಯತ್ನ: ವಿಜಯಪುರ ಜಿಲ್ಲಾಸ್ಪತ್ರೆ ಸಿಬ್ಬಂದಿ ಸಹಿತ ಏಳು ಮಂದಿ ಸೆರೆ

Update: 2021-05-07 09:19 GMT

ವಿಜಯಪುರ, ಮೇ 7: ಕೋವಿಡ್ ಸೋಂಕಿತರಿಗೆ ನೀಡುವ ರೆಮಿಡೆಸ್ವಿರ್ ಔಷಧನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ವಿಜಯಪುರ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯ ಏಳು ಮಂದಿ ಸಿಬ್ಬಂದಿಯನ್ನು ಬಂಧಿಸುವಲ್ಲಿ ವಿಜಯಪುರ ಸಿ.ಇ.ಎನ್/ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಎಸ್ಪಿ ಅನುಪಮ್ ಅಗರವಾಲ್‌ ಮಾಹಿತಿ ನೀಡಿದ್ದಾರೆ.

ರಾಜೇಸಾಬ್ ಬಾಬು ಹತ್ತರಕಿಹಾಳ, ಇಮ್ತಿಯಾಝ್ ಹುಸೇನ್ ಸಾಬ್ ಮಟ್ಟಿ, ಶಿವಕುಮಾರ್ ಸಿದ್ದಗೊಂಡ ಮದರಿ, ಮೌಲಾಲಿ ರಝಾಕ್ ಸಾಬ್ ಹತ್ತರಕಾಳ್, ಸೈಯದ್ ಮೌಲಾ ಸಾಬ್ ಆಹೇರಿ, ಜಕಪ್ಪ ಮಲಕಾರಿ ತಡ್ಲಗಿ, ಸಂಜೀವ ನರಸಿಂಹ ಜೋಶಿ, ಯಲ್ಲಮ್ಮ ಕನ್ನಾಳ ಹಾಗೂ ಸುರೇಖಾ ಗಾಯಕವಾಡ ಬಂಧಿತ ಆರೋಪಿಗಳು.

ಬಂಧಿತರಿಂದ ರೆಮಿಡೆಸ್ವಿರ್ 3 ಬಾಟಲ್, ರೆಮಿಡೆಸ್ವಿರ್ ಖಾಲಿ ಬಾಟಲ್ ಗಳು 24, 64 ಸಾವಿರ ನಗದು ಸೇರಿ 7 ಮೊಬೈಲ್ ಫೋನ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕುರಿತು ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News