ಬೆಟ್ಟದ ಹೂವು ಖ್ಯಾತಿಯ ಹಿರಿಯ ನಟ ಶಂಖನಾದ ಅರವಿಂದ್‌ ಕೊರೋನ ದಿಂದ ನಿಧನ

Update: 2021-05-07 09:26 GMT

ಬೆಂಗಳೂರು, ಮೇ.7: ಬೆಟ್ಟದ ಹೂವು ಖ್ಯಾತಿಯ ಹಿರಿಯ ನಟ ಶಂಖನಾದ ಅರವಿಂದ್‌ (70) ಅವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್ ದೃಢಪಟ್ಟ ಬಳಿಕ ಅರವಿಂದ್‌ ಅವರು ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಹೆಚ್ಚಾಗಿ ಇಂದು ನಿಧನರಾಗಿದ್ದಾರೆ. ಶಂಖನಾದ ಅರವಿಂದ್‌ ಮೂವರು ಮಕ್ಕಳನ್ನು ಅಗಲಿದ್ದಾರೆ.

70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News