ಸಂಸದ ತೇಜಸ್ವಿ ಸೂರ್ಯರನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮನವಿ

Update: 2021-05-08 11:22 GMT

ಸಾಗರ : ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ ರನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಾಗರ ಶಾಖೆ  ವತಿಯಿಂದ ಸಾಗರ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಟಾಧಿಕಾರಿಗಳ ಮೂಲಕ ಪೋಲಿಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆಯುವ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರಿನ ವಾರ್ ರೂಂಗೆ ಹೋಗಿ ತಾವು ಪಡೆದ ಪಟ್ಟಿಯಲ್ಲಿ ಕೆಲವು ಅನ್ಯ ಕೋಮಿನ ಉದ್ಯೋಗಿಗಳ ಹೆಸರು ಹೇಳಿ ಇವರು ಮದರಸ ಕಟ್ಟಲೋ ಅಥವಾ ಹಿಂದೂಗಳ ಪ್ರಾಣ ತೆಗೆಯಲು ಇವರನ್ನು ನೇಮಿಸಿಕೊಂಡಿದ್ದರೆ ಎಂದು ಈ ಅಮಾಯಕ ಸಿಬ್ಬಂದಿಗಳ ಮೇಲೆ ಆರೋಪ ಮಾಡಿರುವುದು ಕೋಮುಭಾವನೆ ಕೆರಳಿಸುವ ಕೆಲಸವಾಗಿದೆ. ಶಾಂತಿ ಸುವ್ಯವಸ್ಥೆಗೆ ದಕ್ಕೆ ತಂದಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಸಮಾಜಕ್ಕೆ ಅಪಾಯವಾಗಿದ್ದು, ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ದೂಗುರು ಪರಮೇಶ್ವರ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News