ಸಿ.ಟಿ.ರವಿ ಸರಕಾರದ ವೈಫಲ್ಯದ ಬಗ್ಗೆ ಧ್ವನಿ ಎತ್ತಬೇಕು: ಭೋಜೇಗೌಡ

Update: 2021-05-08 11:57 GMT

ಚಿಕ್ಕಮಗಳೂರು: ದೇಶದಲ್ಲಿ ಸಣ್ಣ ಕಿಡಿ ಹತ್ತಿದರೂ ಮಾತನಾಡುತ್ತಿದ್ದ ಶಾಸಕ ಸಿ.ಟಿ.ರವಿ, ಸರಕಾರದ ವೈಫಲ್ಯತೆಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಶ್ನಿಸಿದರು.

ಸೋಂಕಿತರಿಗೆ ಆಕ್ಸಿಜನ್, ಹಾಸಿಗೆ, ಔಷಧ ನೀಡುವಲ್ಲಿ ಸರಕಾರ ವಿಫಲವಾಗಿದ್ದು, ಸರಕಾರದ ವಿರುದ್ಧ ಸಾರ್ವಜನಿಕರು ಉಗಿಯುತ್ತಿದ್ದಾರೆ. ಬಿಜೆಪಿ ಪಕ್ಷದವರೂ ಸರಕಾರವನ್ನು ಟೀಕಿಸುತ್ತಿದ್ದಾರೆ. ಆದರೆ ಸಿ.ಟಿ.ರವಿ ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಮಾತನಾಡದಿದ್ದರೇ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾಡಳಿತ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆ ಇಲ್ಲ, ಆಕ್ಸಿಜನ್ ಇಲ್ಲವೆಂದು ಹೇಳುತ್ತಿದೆ. ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತ ಆಕ್ಸಿಜನ್ ಪೂರೈಕೆ ಮಾಡಲೀ ಎಂದು ಒತ್ತಡ ಹೇರುತ್ತಿವೆ. ಹಾಗಾದರೇ ಕೋವಿಡ್‍ನ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಪಾತ್ರವೇನು ಎಂದು ಪ್ರಶ್ನಿಸಿದ ಅವರು, ಖಾಸಗಿ ಆಸ್ಪತ್ರೆಗಳು ವ್ಯಾಪಾರಿ ಮನೋಭಾವನೆಯಿಂದ ಕೆಲಸ ಮಾಡದೇ ಮಾನವೀಯತೆ ತೋರಬೇಕು ಎಂದರು.

ಶಾಸಕ ಸಿ.ಟಿ.ರವಿ ಪದೇ ಪದೇ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಸಭೆ ನಡೆಸುವುದರಿಮದ ಯಾವುದೇ ಪ್ರಯೋಜನವಿಲ್ಲ, ಸೋಂಕಿತರ ಚಿಕಿತ್ಸೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಅಗತ್ಯವಸ್ತುಗಳ ಸೇವೆಯಲ್ಲಿ ದುರುಪಯೋಗವಾಗುತ್ತಿದ್ದು, ಸಾರ್ವಜನರಿಕರನ್ನು ಸಲಿಗೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ನಗರ ಪ್ರದೇಶದಿಂದ ಹಳ್ಳಿಗಳಿಗೆ ಜನರು ಹೋಗುತ್ತಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ. ಜಿಲ್ಲಾಡಳಿತ ಇದನ್ನು ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News