ಸಚಿವಾಲಯ ಅಧಿಕಾರಿ/ಸಿಬ್ಬಂದಿಗೆ ಮೇ 23ರ ವರೆಗೆ ಕಚೇರಿ ಹಾಜರಾತಿಗೆ ವಿನಾಯಿತಿ

Update: 2021-05-08 13:49 GMT

ಬೆಂಗಳೂರು, ಮೇ 8: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರ ಹರಡುವಿಕೆಯ ಸರಪಳಿ ತುಂಡರಿಸಲು ರಾಜ್ಯ ಸರಕಾರ ಎ. 27ರಿಂದ ಮೇ 12ರ ವರೆಗೆ ಕೊರೋನ ಕಫ್ರ್ಯೂ, ಇದೀಗ ಮೇ 10ರಿಂದ ಮೇ 24ರ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದ್ದು, ಅಗತ್ಯ ಸೇವೆಗಳ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಇಲಾಖೇಗಳ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಚೇರಿ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸುತ್ತೋಲೆ ಹೊರಡಿಸಿದ್ದಾರೆ.

ಸಚಿವಾಲಯದ ಎಲ್ಲ ಅಧಿಕಾರಿ/ನೌಕರರು ಮೇ 23ರ ವರೆಗೆ ಕಚೇರಿ ಹಾಜರಾತಿಯಿಂದ ವಿನಾಯಿತಿಯನ್ನು ನೀಡಲಾಗಿದೆ. ಉಳಿದಂತೆ ಸಚಿವಾಲಯದ ಕೆಲಸ-ಕಾರ್ಯಗಳಿಗೆ ಸಂಬಂಧಿಸಿದಂತೆ ಸದರಿ ಸುತ್ತೋಲೆಯಲ್ಲಿ ತಿಳಿಸಿದ ಮಾರ್ಗಸೂಚಿ/ನಿಬಂಧನೆಗಳು ಜಾರಿಯಲ್ಲಿರುತ್ತದೆ. ಅಲ್ಲದೆ, ಶಾಸಕರ ಭವನದ ಕೆಲಸ-ಕಾರ್ಯಗಳಿಗೆ ಸಂಬಂಧಿಸಿದಂತೆ ಅಲ್ಲಿನ ಅಧಿಕಾರಿ/ನೌಕರರು ಕಾರ್ಯಗಳ ಅಗತ್ಯತೆ ಅನುಗುಣವಾಗಿ ನಿಯೋಜಿಸಿದಂತೆ ಕಾರ್ಯ ನಿರ್ವಹಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News