ಕುಟುಂಬಸ್ಥರಿಗೆ ಸೋಂಕು ಹರಡಬಹುದೆಂದು ಹೆದರಿ ಕೊರೋನ ಸೋಂಕಿತ ವೃದ್ಧೆ ಆತ್ಮಹತ್ಯೆ

Update: 2021-05-10 11:51 GMT

ಕೊಳ್ಳೇಗಾಲ, ಮೇ 10: ಕೊರೋನ ದೃಢಪಟ್ಟ ವೃದ್ಧೆಯೊಬ್ಬರು ತನ್ನಿಂದ ಕುಟುಂಬದವರಿಗೆ ಸೋಂಕು ಹರಡಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಸಿದ್ದಮ್ಮ(70) ಮೃತ ವೃದ್ಧೆ. ಇವರಿಗೆ ಮೇ1 ರಂದು ಜ್ವರ ಕಾಣಿಸಿಕೊಂಡಿದ್ದು, ಮೇ.3 ರಂದು ಕೊರೋನ ಸೋಂಕು ಇರುವುದು ದೃಢಪಟ್ಟಿದೆ.

ಬಳಿಕ ವೈದ್ಯರ ಸಲಹೆಯಂತೆ ಹೋಂ ಐಸೋಲೇಟ್ ಆಗಿದ್ದ ಅವರು, ತನ್ನಿಂದ ತನ್ನ ಕುಟುಂಬಕ್ಕೂ ಕೊರೋನ ಹರಡಬಹುದೆಂದು ಹೆದರಿ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಸೋಮವಾರ ವೃದ್ಧೆಯ ಕೊಠಡಿಗೆ ಕಾಫಿ ನೀಡಲು‌ ಹೋದಾಗ ಸಿದ್ದಮ್ಮ ಹಗ್ಗದಿಂದ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

'ತಾಯಿಗೆ ಕೊರೋನ ಸೋಂಕು ಬಂದಿರುವುದರಿಂದ ಜಿಗುಪ್ಸೆಗೊಳಗಾಗಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎಂದು ಮೃತ ವೃದ್ಧೆಯ ಮಗ ಸೀಗನಾಯಕ ಪೊಲೀಸರಿಗೆ ತಿಳಿಸಿದ್ದಾರೆ.

ವಿಚಾರ ತಿಳಿದ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಅಶೋಕ್, ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯರು ಸ್ಥಳಕ್ಕೆ ದೌಡಾಯಿಸಿ ಕೊರೋನ ನಿಯಮಾವಳಿಯಂತೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News