ಸಾವಿನ ಮನೆಯಲ್ಲೂ ಲಾಭ ಪಡೆಯುತ್ತಿರುವ ಸರಕಾರ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

Update: 2021-05-10 14:58 GMT

ಬೆಂಗಳೂರು, ಮೇ 10: ಕನಿಷ್ಠ ಆಕ್ಸಿಜನ್ ವ್ಯವಸ್ಥೆಯೂ ಮಾಡದ ರಾಜ್ಯ ಸರಕಾರ ಸಾವಿನ ಮನೆಯಲ್ಲಿ ಲಾಭಕೋರತನಕ್ಕೆ ಲಜ್ಜೆಯಿಲ್ಲದೆ ಕೈ ಹಾಕಿದೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಖುದ್ದು ಕೋವಿಡ್ ಪರೀಕ್ಷೆ, ಲಸಿಕೆಗಳನ್ನು ಸ್ವತಃ ಪೂರೈಸದೆ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಬೇಕಿರುವ ಆಮ್ಲಜನಕ ಪೂರೈಕೆಯುಕ್ತ ಹಾಸಿಗೆಗಳನ್ನು ನೀಡದೇ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸಾಮಾನ್ಯ ಹಾಸಿಗೆಗಳು ಮಾತ್ರ ಆಸ್ಪತ್ರೆಯಲ್ಲಿ ಖಾಲಿ ಇವೆ. ಆದರೆ, ಆಮ್ಲಜನಕಯುಕ್ತ ವೆಂಟಿಲೇಷನ್ ಹಾಸಿಗೆ ನೀಡದೆ ಬೆಂಗಳೂರು ಗ್ರಾಮಾಂತರ ಭಾಗದ ಸೋಂಕಿತರನ್ನು ನಗರದೊಳಗಿನ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News