"ನಿಮ್ಮ ಜತೆಯಲ್ಲಿ ಇರುವವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ, ಆ ಮೇಲೆ ನಮ್ಮ ಪರಿಶೀಲನೆ ನಡೆಸಿ’"

Update: 2021-05-18 07:42 GMT

ತುಮಕೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಜತೆಯಲ್ಲಿ ಇರುವವರಿಗೆ ಉದಾರವಾಗಿ ವರ್ತಿಸುವಂತೆ ಹೇಳಿ, ಆ ಮೇಲೆ ನಮ್ಮ ಪರಿಶೀಲನೆ ನಡೆಸಿ’ ಎಂದು ನೇರವಾಗಿ ಹೇಳಿದ್ದಾರೆ.

ಸೋಮವಾರ ವೀಡಿಯೊ ಕಾನ್ಫರೇನ್ಸ್ ಮೂಲಕ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಪರಿಶೀಲನೆಯ ವೇಳೆ ಜಿಲ್ಲೆಗೆ ಮತ್ತೊಂದು ಅಕ್ಸಿಜನ್ ಪ್ಲಾಂಟ್ ಹಾಕಲು ಸರಕಾರದ ಮುಖ್ಯ ಕಾರ್ಯದರ್ಶಿಗಳು ಅನುಮೋದನೆ ನೀಡಿದರೂ ಕೆಲವರು ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಧುಸ್ವಾಮಿ, ಜಿಲ್ಲೆಗೆ ಒಂದು ದಿನಕ್ಕೆ 18 ಎಲ್.ಬಿ. ಅಗತ್ಯವಿದೆ. ಲಭ್ಯವಿರುವುದು 12 ಎಲ್.ಬಿ. ಮಾತ್ರ. ಇನ್ನೊಂದು ಪ್ಲಾಂಟ್ ಮಂಜೂರು ಮಾಡಿದ್ದರೆ, ಇಂದು ಜಿಲ್ಲೆಯ ಸಮಸ್ಯೆ ಬಗೆಹರಿಯುತಿತ್ತು. ಮೊದಲು ನಿಮ್ಮ ಅಕ್ಕಪಕ್ಕದಲ್ಲಿರುವವರು ಕೆಲಸ ಮಾಡಲು ಹೇಳಿ ನಂತರ ನಮ್ಮನ್ನು ಪರಿಶೀಲನೆ ಮಾಡಿ ಎಂದು ಹೇಳಿದರು.

ಜಿಲ್ಲೆಗೆ ಅಗತ್ಯ ಇರುವಷ್ಟು ಅಕ್ಸಿಜನ್, ಮೆಡಿಸಿನ್ ಸರಬರಾಜು ಮಾಡಿ ಅಮೇಲೆ ನಮ್ಮಿಂದ ಪ್ರಗತಿ ಕೇಳಿ, ರೆಮಿಡಿಸಿವರ್ ಚುಚ್ಚುಮದ್ದಿನ ಕೊರತೆ ಇದೆ. ರೋಗಿ ಐಸಿಯುಗೆ ಬಂದ ನಾಲ್ಕೈದು ದಿನಗಳ ನಂತರ ಕೊಟ್ಟರೆ ಏನು ಪ್ರಯೋಜನ ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News