ಅಪಾಯಕಾರಿ ಔಷಧಿ ಹಂಚಿಕೆ ಆರೋಪ: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ಧ ದೂರು

Update: 2021-05-18 12:54 GMT
ರಕ್ಷಾ ರಾಮಯ್ಯ

ಬೆಂಗಳೂರು, ಮೇ 18: 'ಕೊರೋನ ಸೋಂಕು ಸಂಬಂಧ ದೇಹಕ್ಕೆ ಅಪಾಯ ಉಂಟುಮಾಡುವ ಔಷಧಿಗಳನ್ನು ವಿತರಿಸಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಸೇರಿ ಕಾಂಗ್ರೆಸ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಬಿಜೆಪಿ ಯುವ ಮೋರ್ಚಾ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಯುವ ಮೋರ್ಚಾ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ವಿಜೇಂದ್ರ, ಕೊರೋನ ರೋಗಿಗಳಿಗೆ ಯುವ ಕಾಂಗ್ರೆಸ್ ಸದಸ್ಯರು ಇತ್ತೀಚಿಗೆ ಔಷಧಗಳನ್ನು ಹಂಚಿಕೆ ಮಾಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಆದರೆ, ಈ ಔಷಧ ಕಿಟ್‍ನಲ್ಲಿ ಅಪಾಯಕಾರಿ ಮಾತ್ರೆಗಳಿರುವುದು ಗೊತ್ತಾಗಿದೆ ಎಂದು ಆರೋಪಿಸಿದರು.

ಕೋವಿಡ್ ಸಂದರ್ಭದಲ್ಲಿ ಔಷಧ ಕುರಿತು ಅನೇಕರಲ್ಲಿ ಮಾಹಿತಿ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ವೈದ್ಯರ ಅನುಮತಿ ಇಲ್ಲದೆ, ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸ್ಟಿರಾಯಿಡ್(ಮಾತ್ರೆ) ಔಷಧ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಈ ಸಂಬಂಧ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಪ್ರಕಾರ ಸ್ಟಿರಾಯಿಡ್ ಔಷಧಗಳನ್ನು ವೈದ್ಯರು ಸೂಚಿಸಿದರೆ ಮಾತ್ರ ಇದನ್ನು ಮಾರಾಟ ಮಾಡಲು ಸಾಧ್ಯ. ಆದರೆ, ಕಾಂಗ್ರೆಸ್ ಸದಸ್ಯರು, ಯಾರ ಅನುಮತಿಯೂ ಇಲ್ಲದೆ ಹಂಚಿಕೆ ಮಾಡುತ್ತಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News