ಒತ್ತಾಯಕ್ಕೆ ಮಣಿದು ಪ್ಯಾಕೇಜ್ ಘೋಷಿಸಿದ್ದಾರೆ, ಬಡವರ ಬಗ್ಗೆ ಸರಕಾರಕ್ಕೆ ಚಿಂತೆಯೇ ಇಲ್ಲ: ಡಿ.ಕೆ.ಶಿವಕುಮಾರ್

Update: 2021-05-19 06:56 GMT

ಬೆಂಗಳೂರು, ಮೇ 19: ರಾಜ್ಯ ಸರಕಾರದ ಪ್ಯಾಕೇಜ್ ಮೇಲೆ ನನಗೆ ನಂಬಿಕೆ ಇಲ್ಲ. ಕಳೆದ ಬಾರಿಯೂ ಪ್ಯಾಕೇಜ್ ಘೋಷಿಸಲಾಗಿತ್ತು. ಯಾರ್ಯಾರಿಗೆ ಪರಿಹಾರ ಸಿಕ್ಕಿದೆ ಎಂದು ಲೆಕ್ಕ ತೋರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಯಾಕೇಜ್ ನಲ್ಲಿ ಅಸಂಘಟಿತ, ಗ್ರಾಮೀಣ ಭಾಗದವರಿಗೆ, ರೈತರಿಗೆ ಏನೂ ಸಿಕ್ಕಿಲ್ಲ. ಕಟ್ಟಡ ಕಾರ್ಮಿಕರಿಗೂ ಏನೂ ಲಭಿಸಿಲ್ಲ. ಕೊಡವುದಾದರೆ ವ್ಯವಸ್ಥಿತವಾಗಿ ಕೊಡಲಿ ಎಂದು ಹೇಳಿದರು.

ನಾವು ಪ್ಯಾಕೇಜ್ ಘೋಷಿಸಲು ಒತ್ತಾಯ ಮಾಡಿದ್ದಕ್ಕೆ ಸುಮ್ಮನೇ ಪ್ಯಾಕೇಜ್ ಘೋಷಿಸಿದ್ದಾರೆ ಹೊರತು ಜನರಿಗೆ ತಲುಪಿಸಲು ಮಾಡಿದ ಯೋಜನೆ ಅಂತೂ ಅಲ್ಲ ಎಂದು ಕಿಡಿಕಾರಿದರು.

ಪಡಿತರ ವಿತರಣೆ ಬಗ್ಗೆ ಎಲ್ಲವೂ ಗೊಂದಲವಾಗಿದೆ. ಪರಿಹಾರ ಘೋಷಣೆಯ ವಿಧಾನವೇ ಸಂಪೂರ್ಣ ವಿಫಲಾಗಿದೆ. ಪ್ಯಾಕೇಜ್ ಘೋಷಣೆಗೂ ಮುನ್ನ ಇವರು ಬ್ಯಾಂಕರ್ಸ್ ಜೊತೆ ಸಭೆ ನಡೆಸಿದ್ದಾರಾ ? ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ಬಡವರ ಬಗ್ಗೆ ಸರಕಾರ ಚಿಂತನೆಯೇ ಮಾಡಿಲ್ಲ ಎಂದು ಟೀಕಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News