ತರುಣ್ ತೇಜಪಾಲ್ ಅತ್ಯಾಚಾರ ಪ್ರಕರಣ: ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿದ ಗೋವಾ ನ್ಯಾಯಾಲಯ

Update: 2021-05-19 19:33 GMT

ಲಕ್ನೋ, ಮೇ 19: ಪತ್ರಕರ್ತ ತರುಣ್ ತೇಜಪಾಲ್ ಅವರ ವಿರುದ್ಧ ದಾಖಲಿಸಲಾಗಿರುವ ಲೈಂಗಿಕ ದೌರ್ಜನ್ಯದ ಪ್ರಕರಣದ ತೀರ್ಪನ್ನು ಗೋವಾ ಸೆಷನ್ಸ್ ನ್ಯಾಯಾಲಯ ಶುಕ್ರವಾರದ ವರೆಗೆ ಮುಂದೂಡಿದೆ.

ತೀರ್ಪನ್ನು ನ್ಯಾಯಾಲಯ ಬುಧವಾರ ಘೋಷಿಸಲಿದೆ ಎಂದು ನಿರೀಕ್ಷಿಸಲಾಗಿತ್ತು.
ತೆಹಲ್ಕಾ ಮ್ಯಾಗಝಿನ್ನ ಮಾಜಿ ಪ್ರಧಾನ ಸಂಪಾದಕರಾಗಿರುವ ತೇಜ್ಪಾಲ್ ಅವರು 2013ರಲ್ಲಿ ಎಲವೇಟರ್ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಅವರ ಕಿರಿಯ ಸಹೋದ್ಯೋಗಿ ಆರೋಪಿಸಿದ್ದರು.
    
ತೇಜ್ಪಾಲ್ ಪರ ನ್ಯಾಯವಾದಿ ಶುಹಾಸ್ ವೆಲಿಪ್, ಕಳೆದ 2-3 ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಮಪುಸಾದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. ಆದುದರಿಂದ ತೀರ್ಪು ಪ್ರಕಟಿಸುವುದನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ನ್ಯಾಯಾಲಯ ತೀರ್ಪು ಪ್ರಕಟವನ್ನು ಮೇ 12ಕ್ಕೆ ಮುಂದೂಡಿತ್ತು. ಕೊರೋನ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸಿಬ್ಬಂದಿ ಕೊರತೆ ತೀರ್ಪು ಮುಂದೂಡಲು ಕಾರಣ ಎಂದು ಅದು ಹೇಳಿತ್ತು. ಅದಕ್ಕಿಂತ ಮೊದಲ ತೀರ್ಪನ್ನು ಅದು ಎಪ್ರಿಲ್ 2ಕ್ಕೆ ಮಂದೂಡಿತ್ತು.
ತೇಜ್ಪಾಲ್ ಅವರು 2014ರಿಂದ ಜಾಮೀನಿನಲ್ಲಿ ಇದ್ದಾರೆ. ಗೋವಾದ ವಿಚಾರಣಾ ನ್ಯಾಯಾಲಯ 2017 ಸೆಪ್ಟಂಬರ್ನಲ್ಲಿ ತೇಜ್ಪಾಲ್ ಅವರ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳದ ಆರೋಪ ಹೊರಿಸಿತ್ತು. ತಾನು ತಪ್ಪೆಸಗಿಲ್ಲ ಎಂದು ಅವರು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News