ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲು ನಟ ಸೋನು ಸೂದ್ ರ ನೆರವು ಕೋರಿದ ಸೇನಾ ಕಮಾಂಡರ್: ತೀವ್ರ ಚರ್ಚೆ

Update: 2021-05-23 09:24 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್‌ ಎರಡನೇ ಅಲೆಯು ವ್ಯಾಪಕವಾಗಿ ಹಾನಿಯುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೆರವನ್ನು ಕೋರುವ ಬದಲು ಬೆಟಾಲಿಯನ್‌ ನ ಸೇನಾಧಿಕಾರಿ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲು ನೆರವು ಕೋರಿ ಬಾಲಿವುಡ್‌ ನಟ ಸೋನು ಸೂಧ್‌ ರಿಗೆ ಪತ್ರ ಬರೆದದ್ದು ಸದ್ಯ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಚರ್ಚೆಗೊಳಗಾಗಿದೆ. ಇದು ಸೇನಾ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೇ13 ರಂದು ಬರೆದ ಪತ್ರದ ಪ್ರಕಾರ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನ ಭಾಗವಾಗಿ ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಸಹಾಯ ಮಾಡುವಂತೆ ಜೈಸಲ್ಮೇರ್‌ ಮೂಲದ ಕಾಲಾಳುಪಡೆ ಬೆಟಾಲಿಯನ್ ಕಮಾಂಡಿಂಗ್‌ ಆಫೀಸರ್ ಸೋನು ಸೂದ್ ಅವರನ್ನು ವಿನಂತಿಸಿತು.‌

ಸೀಮಿತ ಸಂಪನ್ಮೂಲಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಸಲಕರಣೆಗಳ ಅವಶ್ಯಕತೆಯಿದೆ ಮತ್ತು ನಾಲ್ಕು ಐಸಿಯು ಬೆಡ್‌ಗಳು, 10 ಆಕ್ಸಿಜನ್ ಸಾಂದ್ರಕಗಳು, 10 ಜಂಬೊ ಆಕ್ಸಿಜನ್ ಸಿಲಿಂಡರ್‌ಗಳು (7000 ಲೀಟರ್ ಗಳು), ಒಂದು ಎಕ್ಸರೆ ಯಂತ್ರ, ಎರಡು ಜನರೇಟರ್ ಸೆಟ್‌ಗಳನ್ನು ಕೋರಿದೆ ಎಂದು ಸಿಒ ತನ್ನ ಪತ್ರದಲ್ಲಿ ತಿಳಿಸಿದೆ.

ಈ ಪತ್ರವು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗುತ್ತಿರುವಂತೆಯೇ ಸೇನಾಧಿಕಾರಿಗಳು, ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ ಕಮಾಂಡರ್‌ ಗಳು ಚರ್ಚೆಯ ಮುನ್ನೆಲೆಗೆ ತಲುಪಿ ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News