ಪ್ಯಾಲೆಸ್ತೀನ್‌ ಪರ ಪೋಸ್ಟ್‌ ಹಾಕಿದ್ದಕ್ಕೆ ಪತ್ರಕರ್ತೆಯನ್ನು ವಜಾ ಮಾಡಿದ ಸುದ್ದಿ ಸಂಸ್ಥೆ

Update: 2021-05-23 09:44 GMT
photo: newyorktimes

ಹೊಸದಿಲ್ಲಿ: ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗಾಗಿ ಕಳೆದ ವಾರ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯಿಂದ ವಜಾಗೊಂಡ ಯುವ ಪತ್ರಕರ್ತೆ ಎಮಿಲಿ ವೈಲ್ಡರ್ ತಮ್ಮನ್ನು "ವಸ್ತುನಿಷ್ಠತೆ ಮತ್ತು ಸಮಾಜ ಮಾಧ್ಯಮದ ನಿಯಮಾವಳಿಯ ಅಸಮಾನ ಜಾರಿಯ ಸಂತ್ರಸ್ತೆ" ಎಂದು ಕರೆದುಕೊಂಡಿದ್ದಾರೆ. ಇದು ಹಲವು ಮಂದಿ ಪತ್ರಕರ್ತರನ್ನು ನಿರ್ಬಂಧಿಸಿದೆ ಎಂದು ವಿವರವಾದ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

ಮಧ್ಯಪ್ರಾಚ್ಯದ ಸ್ಥಿತಿಗತಿ ಬಗೆಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ ಎಮಿಲಿಯವರನ್ನು ಎಪಿ ಸುದ್ದಿಸಂಸ್ಥೆ ವಜಾ ಮಾಡಿತ್ತು. ಸಂಸ್ಥೆಯ ಕ್ರಮಕ್ಕಾಗಿ ವಾಗ್ದಾಳಿ ನಡೆಸಿರುವ ಅವರು, "ಪ್ರಾಮಾಣಿಕ ಸಿಟ್ಟು ಅಥವಾ ನ್ಯಾಯದ ಬಗೆಗೆ ಒಲವು ಹೊಂದಿದ ಪರಿಣಾಮ ಬೀರಬಲ್ಲ ಕಥೆ ಹೇಳಲು ಹೊರಟಿರುವ ಯುವ ಜನಾಂಗಕ್ಕೆ ನೀವು ಯಾವ ಸಂದೇಶ ನೀಡಬಯಸಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.

ಅನಾಮಧೇಯ ಕ್ರೂರ ಟ್ರೋಲಿಂಗ್ ಮಾಡುವವರಿಗೆ ಅಸೋಸಿಯೇಟೆಡ್ ಪ್ರೆಸ್‍ನಂಥ ಸಂಸ್ಥೆ ಬಲಿಯಾಗುವ ಮೂಲಕ ಮಹತ್ವಾಕಾಂಕ್ಷಿ ವರದಿಗಾರರಿಗೆ ಯಾವ ಭವಿಷ್ಯದ ಭರವಸೆ ನೀಡುತ್ತದೆ ಎಂದು ಕೇಳಿದ್ದಾರೆ. ಪ್ಯಾಲಸ್ತೀನಿಯನ್ನರ ನೋವಿನ ಅನುಭವವನ್ನು ಹಂಚಿಕೊಳ್ಳುವುದು ಅಥವಾ ಅವರ ಸ್ಥಿತಿಯನ್ನು ವರ್ಣಿಸಲು ಬಳಸಿದ ಭಾಷೆಯನ್ನು ಪರೀಕ್ಷಿಸುವ ಮೂಲಕ ʼಬದಲಾಯಿಸಲಾದ ಪಕ್ಷಪಾತʼ ಎಂದು ತೀರ್ಮಾನಿಸುವುದಕ್ಕೆ ಈ ಉದ್ಯಮದಲ್ಲಿ ಏನು ಅರ್ಥ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

"ಕಳೆದ ಕೆಲ ದಿನಗಳು ಅಗಾಧವೆನಿಸಿದ್ದು, ನನ್ನ ಧ್ವನಿಯನ್ನು ಹತ್ತಿಕ್ಕಿ ದಮನಿಸಲಾಗದು. ನಾನು ಶೀಘ್ರವೇ ಹಿಂದಿರುಗುತ್ತೇನೆ" ಎಂದು ಅವರು ಹೇಳಿದ್ದಾರೆ.

ಬಲಪಂಥೀಯ ಚಳವಳಿಗಾರರು, ರಾಜಕಾರಣಿಗಳು ಮತ್ತು ಮಾಧ್ಯಮದವರ ಕಳಂಕ ಹಚ್ಚುವ ಅಪಪ್ರಚಾರಗಳು, ತನ್ನನ್ನು ವಜಾಗೊಳಿಸಲು ಕಾರಣವಾದವು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜು ದಿನಗಳ ಪ್ಯಾಲಸ್ತೀನಿ ಹೋರಾಟ ಮತ್ತು ಪ್ಯಾಲಸ್ತೀನಿ ಪರ ಪೋಸ್ಟ್ ಗಳು ನನ್ನ ಉದ್ಯೋಗಕ್ಕೆ ಕುತ್ತು ತರಲಾರವು ಎಂದು ಸಂಪಾದಕರು ಈ ಮೊದಲು ಭರವಸೆ ನೀಡಿದ್ದರು ಎಂದು ಅವರು ವಿವರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News