ಬೆಂಗಳೂರಿನಲ್ಲಿ 'ಸೂರ್ಯನ ಸುತ್ತ ಉಂಗುರ': ಜನರನ್ನು ಚಕಿತಗೊಳಿಸಿದ ವಿಸ್ಮಯಕಾರಿ ದೃಶ್ಯ

Update: 2021-05-24 13:12 GMT

ಬೆಂಗಳೂರು, ಮೇ 24: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಸುಮಾರಿಗೆ ಆಗಸದಲ್ಲಿ ಉಂಗುರದಂಥ ಆಕೃತಿಯೊಂದು ಸೂರ್ಯನ ಸುತ್ತಲೂ ಆವರಿಸಿ ಜನರನ್ನು ಚಕಿತರನ್ನಾಗಿಸಿತು. ಸರಿಸುಮಾರು ಅರ್ಧತಾಸು ಸೂರ್ಯ ವಿಸ್ಮಯಕಾರಿಯಾಗಿ ಕಂಗೊಳಿಸಿತು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭವಾದ ಈ ವಿದ್ಯಮಾನ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಜನರ ವೀಕ್ಷಣೆಗೆ ಸಿಕ್ಕಿದೆ. ಇನ್ನು, ಈ ಕುರಿತು ಪ್ರತಿಕ್ರಿಯಿಸಿದ ವಿಜ್ಞಾನಿಯೊಬ್ಬರು, ಸೂರ್ಯನ ಸುತ್ತಲೂ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸಿದೆ. ಕಾಮನಬಿಲ್ಲು ಸೃಷ್ಟಿಯಾದಂತೆ ನಡೆದ ವಿದ್ಯಮಾನ ಇದಾಗಿದ್ದು, ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸ ಕಂಡುಬಂದಿದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಘಟನೆಯನ್ನು ಹಲವರು ಕ್ಯಾಮೆರಾದಲ್ಲೂ ಸೆರೆ ಹಿಡಿದಿದ್ದಾರೆ. ವಾಟ್ಸ್ ಆ್ಯಪ್ ಗ್ರೂಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರಗಳು ವೈರಲ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News