ಒಂದೇ ದಿನ ಗಂಡ- ಹೆಂಡತಿ ಕೊರೋನ ಸೋಂಕಿನಿಂದ ಮೃತ್ಯು

Update: 2021-05-24 13:19 GMT

ಗುಂಡ್ಲುಪೇಟೆ, ಮೇ 24: ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ದಂಪತಿ ಬಾಳಿಗೆ ಕೊರೋನ ಕೊಳ್ಳಿ ಇಟ್ಟಿದ್ದು, ಒಂದೇ ದಿನ ಗಂಡ-ಹೆಂಡತಿ ಸೋಂಕಿಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಸುದರ್ಶನ(51) ಹಾಗೂ ಹೇಮಲತಾ (46) ಮೃತರು. ಕಳೆದ ಒಂದು ವಾರದ ಹಿಂದೆ ಈ ದಂಪತಿಗೆ ಕೋವಿಡ್ ದೃಢವಾಗಿತ್ತು. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮುಂಜಾನೆ ಸುದರ್ಶನ್ ಅಸುನೀಗಿದರೆ, ಸಂಜೆ ಹೇಮಲತಾ ಕೂಡ ಕೊನೆಯುಸಿರೆಳೆದಿದ್ದಾರೆ.

ಸಾವಿನಲ್ಲೂ ಒಂದಾದ ಈ ದಂಪತಿಯ ಸಮಾಧಿಯನ್ನು ಅಕ್ಕಪಕ್ಕವೇ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪುತ್ರ ಹೇಮಂತ್ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಹತ್ತಾರು ವರ್ಷಗಳಿಂದ ಶಾಲಾ-ಕಾಲೇಜು ಮುಂಭಾಗ ಚುರುಮುರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಸುದರ್ಶನ್ ಗುಂಡ್ಲುಪೇಟೆ ಪಟ್ಟಣದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News