ಎಲ್ಲ ರಾಜ್ಯಗಳಿಗೆ ಹೆಚ್ಚುವರಿ ರೆಮ್‍ಡೆಸಿವಿರ್ ಮಂಜೂರು: ಡಿ.ವಿ.ಸದಾನಂದಗೌಡ

Update: 2021-05-24 17:38 GMT

ಬೆಂಗಳೂರು, ಮೇ 24: ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 23 ರಿಂದ 30 ರವರೆಗಿನ ಅವಧಿಗೆ ಹೆಚ್ಚುವರಿಯಾಗಿ 22.17 ಲಕ್ಷ ರೆಮ್‍ಡೆಸಿವಿರ್ ಬಾಟಲಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಈ ಮೊದಲು 76.70 ಲಕ್ಷ ಔಷಧಿಯ ಬಾಟಲಿಗಳನ್ನು ಮೇ 23ರವರೆಗೆ ಎಲ್ಲ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಇದರಿಂದ ಇದುವರೆಗೆ ದೇಶಾದ್ಯಂತ ಒಟ್ಟು 98.87 ಲಕ್ಷ ರೆಮ್‍ಡೆಸಿವಿರ್ ಬಾಟಲಿಗಳನ್ನು ಮಂಜೂರು ಮಾಡಿದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News