ಬಿ.ವೈ.ವಿಜಯೇಂದ್ರ ಮುಂದೆ ರಾಜ್ಯದ ಸಿಎಂ ಆಗಲಿದ್ದಾರೆ: ಬಿಜೆಪಿ ಶಾಸಕ ಪ್ರೀತಮ್ ಗೌಡ

Update: 2021-05-26 16:04 GMT
Photo: Twitter.com/nimmapreetham

ಹಾಸನ, ಮೇ 26: ಸಮಪರ್ಕವಾಗಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪರವರ ನಾಯಕತ್ವದ ಬದಲಾವಣೆಗೆ ಯಾರಾದರು ಹೊರಟರೆ ಜನಾಕ್ರೋಶಕ್ಕೆ ಕಾರಣವಾಗುತ್ತದೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಎಚ್ಚರಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಯಾರು ಮಾಹಿತಿ ಕೊಡುತ್ತಾರೊ ಅದನ್ನು ನಾನು ಗಮನಿಸಿರುವುದಿಲ್ಲ. ನಾನು ಮಾಧ್ಯಮ ವರದಿಗಳನ್ನು ನೋಡಿದ್ದೆನೆ. ಮಾಧ್ಯಮದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸೂರ್ಯ ಚಂದ್ರ ಇದುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಯಡಿಯೂರಪ್ಪನವರು ಮೇ 2023 ರವರಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಾರೆ. 2023ರ ನಂತರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 130 ಕ್ಕೂ ಹೆಚ್ಚು ಸ್ಥಾನ ಪಡೆದು ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳಿಸಿ ದೆಹಲಿಗೆ ಕಳುಹಿಸಿ ಯಡಿಯೂರಪ್ಪ ನಾಯಕತ್ವ ಬಲಪಡಿಸುವ ಅಗತ್ಯವಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರು ಯಾವ ಕನಸೂ ಕಾಣುವುದು ಬೇಡ. ಕೊರೋನ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿದರೆ ರಾಜ್ಯದ ಜನ ಉಗಿಯಲಿದ್ದಾರೆ. ಯಾರಾದರು ನಾಯಕತ್ವ ಬದಲಾವಣೆ ಮಾಡಲು ಹೋದರೆ ಜನಾಕ್ರೋಶ ಆಗುತ್ತದೆ. 20 ಜನ ಅಲ್ಲ 40 ಜನ ದೆಹಲಿಗೆ ಹೋದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಇದನ್ನು ನಾನು ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಪ್ರಶ್ನಾತೀತ ನಾಯಕರು. ಬಿಜೆಪಿ ಪಕ್ಷದ ಶಾಸಕಾಂಗದ ಸಭೆ ಕರೆದಿದ್ದು, ಮಂತ್ರಿಯಾಗಿ ಗೋಪಾಲಯ್ಯನವರಿಗೂ ಗೊತ್ತಿಲ್ಲ. ಮಾಧ್ಯಮದವರಿಗೆ ಗೊತ್ತಿದೆ. ಬಿ.ವೈ. ವಿಜಯೇಂದ್ರ ಕೂಡ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ನಾವು ನರೇಂದ್ರ ಮೋದಿ-ಯಡಿಯೂರಪ್ಪ ನೇತೃತ್ವದಲ್ಲಿ ಮತ ಕೇಳಿ ಶಾಸಕರಾದ್ದೇವೆ. 123 ಶಾಸಕರು ಯಡಿಯೂರಪ್ಪನವರ ಬೆಂಬಲಕ್ಕಿದ್ದೆವೆ ಎಂದರು. 

ದೇವೇಗೌಡ ಮತ್ತು ರೇವಣ್ಣನವರ ಸಹಕಾರದಿಂದ ಜಿಲ್ಲೆಗೆ ಬೇಕಾದ ಎಲ್ಲಾ ಅನುಕೂಲ, ಸಹಕಾರ ಪಡೆದುಕೊಂಡಿದ್ದೇವೆ. ದೇವೇಗೌಡರು ಸರ್ಕಾರಕ್ಕೆ ಮನವಿ ಮಾಡಿದಂತೆ ಜಿಲ್ಲೆಗೆ ಅನುಕೂಲ ಆಗಿದೆ. ಹಾಸನ ಜಿಲ್ಲೆಯ ಜನಪ್ರತಿನಿಧಿಯಾಗಿ ನಾನು ಬೆಂಗಳೂರಿನಿಂದ ಹಾಸನಕ್ಕೆ ವೆಂಟಿಲೇಟರ್, ಆಕ್ಸಿಜನ್ ಕಾನ್ಸಂಟ್ರೇಶನ್ ತಂದಿದ್ದೆನೆ. ಈ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ. ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಹಾಸನ ಜಿಲ್ಲೆಗೆ ನಮ್ಮ ಕ್ಯಾಪ್ಟನ್ ರೇವಣ್ಣನವರು. ನಾನು ತಂಡದ ಸದಸ್ಯನಾಗಿ ಕೆಲಸ ಮಾಡುತ್ತೇನೆ. ರಾಜಕೀಯ ಮಾಡುವ ಸಮಯ ಬಂದಾಗ ರೇವಣ್ಣನವರ ವಿರುದ್ಧ ಬೇಕಾದರೂ ರಾಜಕೀಯ ಮಾಡುತ್ತೆನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News