ಅಬ್ದುಲ್ ರಹ್ಮಾನ್ ಬಂಡಸಾಲೆ
Update: 2021-05-26 17:56 GMT
ಮಂಗಳೂರು, ಮೇ 26: ಮೂಲತಃ ಅಮ್ಮೆಂಬಳ ಕೋಟೆ-ಬಂಡಸಾಲೆಯ ಪ್ರಸ್ತುತ ಮುಂಬೈಯ ಥಾಣೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಅಬ್ದುಲ್ ರಹ್ಮಾನ್ ಬಂಡಸಾಲೆ ಯಾನೆ ಅಮ್ಮೆಂಬಳ ಅದ್ದಮಾಕ (61)ಮಂಗಳವಾರ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮುಂಬೈಯ ಥಾಣೆಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದರು. ಮೃತರ ಅಂತ್ಯಕ್ರಿಯೆಯು ಮುಂಬೈಯಲ್ಲೇ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.