ಪಿಂಚಣಿಗಾಗಿ ಸಾಲುಗಟ್ಟಿ ನಿಂತ ಹಿರಿಯ ನಾಗರಿಕರು

Update: 2021-05-27 18:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 27: ಕೊರೋನ ಲಾಕ್‍ಡೌನ್ ಜಾರಿಯಿಂದ ಕೆಲಸವಿಲ್ಲದೆ ಆರ್ಥಿಕವಾಗಿ ತತ್ತರಿಸಿದ್ದ ಹಿರಿಯ ನಾಗರಿಕರು ಮಾಸಿಕ ಪಿಂಚಣಿಗಾಗಿ ಮೈಸೂರು ರಸ್ತೆಯ ಅಂಚೆ ಕಚೇರಿ ಮುಂದೆ ಗುರುವಾರ ಬೆಳ್ಳಂಬೆಳಗ್ಗೆ ಜನರು ಸಾಲುಗಟ್ಟಿ ನಿಂತಿದ್ದರು.

ಒಂದು ಕಡೆ ಕೊರೋನ ಲಸಿಕೆಗಾಗಿ ಆಸ್ಪತ್ರೆಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರೆ ಮತ್ತೊಂದು ಕಡೆ ಪಿಂಚಣಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು. ಅಂಚೆ ಕಚೇರಿ ಬಾಗಿಲು ತೆರೆಯುವುದಕ್ಕೂ ಮೊದಲೇ ಜಮಾಯಿಸಿದ್ದ ಹಿರಿಯ ನಾಗರಿಕರು ಪಾಸ್‍ಬುಕ್‍ಗಳನ್ನು ಕೈಯಲ್ಲಿ ಹಿಡಿದು ಬಂದಿದ್ದರು.

ಈ ಸ್ಥಳದಲ್ಲಿ ಸುರಕ್ಷಿತ ಅಂತರ ಇರಲಿಲ್ಲ. ಹೆಚ್ಚಾಗಿ ಹಿರಿಯರೇ ಇದ್ದಿದ್ದರಿಂದ ಸೋಂಕು ಬಹಳ ಬೇಗ ಪಸರಿಸುವ ಆತಂಕ ಹೆಚ್ಚಾಗಿತ್ತು. ಅಂಚೆ ಕಚೇರಿ ಸಿಬ್ಬಂದಿಗಳು ಸುರಕ್ಷಿತ ಅಂತರ ಪಾಲಿಸಿ ದೂರ ನಿಲ್ಲಿ ಎಂದು ಪದೇ ಪದೇ ಹೇಳುತ್ತಿದ್ದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News