ಜೂನ್ 1ರಿಂದ ವಿದೇಶಿ ನೌಕರರಿಗೆ ಉದ್ಯೋಗ ಪರ್ಮಿಟ್ ಶುಲ್ಕ ವಿಧಿಸಲಿರುವ ಒಮಾನ್

Update: 2021-05-28 17:08 GMT
ಸಾಂದರ್ಭಿಕ ಚಿತ್ರ

ಮಸ್ಕತ್ (ಒಮಾನ್), ಮೇ 28: ಒಮಾನ್ ಜೂನ್ 1ರಿಂದ ವಿದೇಶಿ ಕೆಲಸಗಾರರ ಮೇಲೆ ನೂತನ ಉದ್ಯೋಗ ಪರ್ಮಿಟ್ ಶುಲ್ಕ ವಿಧಿಸಲಿದೆ ಎಂದು ತಿಳಿದು ಬಂದಿದೆ.

ಮೇಲಿನ ಮತ್ತು ಮಧ್ಯಮ ಸ್ತರದ ಉದ್ಯೋಗಗಳು ಹಾಗೂ ತಾಂತ್ರಿಕ ಮತ್ತು ಕೌಶಲಯುಕ್ತ ಉದ್ಯೋಗಗಳಿಗೆ ನೂತನ ಉದ್ಯೋಗ ಪರ್ಮಿಟ್ ಶುಲ್ಕಗಳು ಅನ್ವಯಿಸುತ್ತವೆ ಎಂದು ಒಮಾನ್ ಕಾರ್ಮಿಕ ಸಚಿವಾಲಯ ಗುರುವಾರ ಪ್ರಕಟಿಸಿದೆ ಎಂದು ‘ಟೈಮ್ಸ್ ಆಫ್ ಒಮಾನ್’ ವರದಿ ಮಾಡಿದೆ. ಹೊಸ ಕೆಲಸದ ಪರ್ಮಿಟ್ಗಳನ್ನು ಪಡೆಯುವಾಗ ಮತ್ತು ಹೊಸ ಉದ್ಯಮಗಳನ್ನು ಆರಂಭಿಸುವಾಗಲೂ ಈ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ ಎಂದಿದೆ.

ನೂತನ ನಿಯಮವು ಈ ವರ್ಷದ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News