75 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔಷಧಿ ಖರೀದಿಗೆ ಆದೇಶ: ಡಾ.ಅಶ್ವತ್ಥ ನಾರಾಯಣ

Update: 2021-05-28 17:40 GMT

ಬೆಂಗಳೂರು, ಮೇ 28: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಕೊಡಲಾಗುವ ಲೈಸೋಮಲ್ ಅಂಪೋಟೆರಿಸಿನ್-ಬಿ ಔಷಧಿಯ 75 ಸಾವಿರ ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾತಾಯಣ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮುಂಬೈನ ಭಾರತ್ ಸೀರಂ ಕಂಪೆನಿಗೆ 50 ಸಾವಿರ ವಯಲ್ಸ್ ಹಾಗೂ ಬೆಂಗಳೂರಿನ ಮೈಲಾನ್ ಫಾರ್ಮಾಸ್ಯೂಟಿಕಲ್ ಕಂಪೆನಿಗೆ 25 ಸಾವಿರ ವಯಲ್ಸ್ ಲೈಸೋಮಲ್ ಅಂಪೋಟೆರಿಸಿನ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಎರಡೂ ಕಂಪೆನಿಗಳಿಗೆ ಗುರುವಾರವೇ (ಮೇ 27) ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿ ಆದೇಶ ನೀಡಲಾಗಿದ್ದು, ಸೀರಂ ಕಂಪೆನಿ ಏಳು ದಿನದಲ್ಲಿ ಹಾಗೂ ಮೈಲಾನ್ ಕಂಪೆನಿ ಮೂರು ದಿನದಲ್ಲಿ ಇಷ್ಟೂ ಔಷಧಿಯನ್ನು ಪೂರೈಕೆ ಮಾಡಲಿವೆ ಎಂದು ಡಾ.ಅಶ್ವತ್ಥನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News