ಬೆಡ್ ಬ್ಲಾಕಿಂಗ್ ದಂಧೆಯ ನಂತರ ಬಿಜೆಪಿ‌ಯಿಂದ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ: ಕಾಂಗ್ರೆಸ್ ಆರೋಪ

Update: 2021-05-29 09:10 GMT

ಬೆಂಗಳೂರು, ಮೇ 29: ಬೆಡ್ ಬ್ಲಾಕಿಂಗ್ ದಂಧೆಯ ನಂತರ ಬಿಜೆಪಿ‌ಯಿಂದ ಈಗ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ. ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವರೂ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. 

ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಬಿಜೆಪಿ ಪಟಾಲಂ ಈಗ ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ ನಡೆಸಿದೆ. ಬಿಬಿಎಂಪಿ ಲಸಿಕೆಗಳನ್ನು 900 ರೂಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾರಿ ಶಾಸಕ ರವಿ ಸುಬ್ರಮಣ್ಯ & ತೇಜಸ್ವಿ ಸೂರ್ಯ 700 ರೂ. ಕಮಿಷನ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉನ್ನತ ತನಿಖೆಯ ಅಗತ್ಯವಿದೆ ಎಂದು ಆಗ್ರಹಿಸಿದೆ.

ಲಸಿಕೆ ಕೊಡಿ ಎಂದರೆ ಲಸಿಕೆ ಸಿಗ್ತಿಲ್ಲ, ನಾವು ನೇಣು ಹಾಕಿಕೊಳ್ಬೇಕಾ ಎನ್ನುವ ಬಿಜೆಪಿ ಉತ್ತರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ನಿಮ್ಮ ಶಾಸಕ, ಸಂಸದರು 900ರೂ ಗಳಿಗೆ ಲಸಿಕೆ ಮಾರುತ್ತಿರುವುದು ಹೇಗೆ? ಆ ಲಸಿಕೆಗಳು ಎಲ್ಲಿಂದ ಸಿಕ್ಕವು? ಸರ್ಕಾರಕ್ಕೆ ಲಸಿಕೆ ಸಿಗದಂತೆ ಬ್ಲಾಕ್ ಮಾಡುತ್ತಿರುವುದು ಯಾರು, ಏಕೆ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News