ಕುಸ್ತಿಪಟು ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ‘ಮಾಸ್ಟರ್ ಮೈಂಡ್’: ದಿಲ್ಲಿ ಪೊಲೀಸ್

Update: 2021-05-29 13:34 GMT

ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ  ಒಲಿಂಪಿಕ್ಸ್  ಪದಕ ವಿಜೇತ ಸುಶೀಲ್ ಕುಮಾರ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ  ಪೊಲೀಸರು, ಸುಶೀಲ್ ಕುಮಾರ್ ಮಾರಣಾಂತಿಕ ದಾಳಿಯ ಹಿಂದಿನ  "ಮಾಸ್ಟರ್ ಮೈಂಡ್" ಎಂದು ಕರೆದಿದ್ದಾರೆ. ನ್ಯಾಯಾಲಯವು ಕುಮಾರ್  ಅವರನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ದಿಲ್ಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ 23 ವರ್ಷದ ಕುಸ್ತಿಪಟು ಕೊಲೆಯ ಪ್ರಕರಣದಲ್ಲಿ ಕಳೆದ ವಾರ ದಿಲ್ಲಿ ಪೊಲೀಸರು ಕುಮಾರ್ ನನ್ನು ಸಹ ಆರೋಪಿ ಅಜಯ್ ಜೊತೆಗೆ ದಿಲ್ಲಿಯ ಮುಂಡ್ಕಾ ಪ್ರದೇಶದಲ್ಲಿ ಬಂಧಿಸಿದ್ದರು.

ಈ ಮೊದಲು ಕುಸ್ತಿಪಟುವನ್ನು ಆರು ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಕಳುಹಿಸಲಾಗಿತ್ತು. ಅಜಯ್ ನನ್ನು ನಾಲ್ಕು ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹಾಗೂ  ಅಜಯ್ ಅವರು ಪೊಲೀಸರೊಂದಿಗೆ ಸಹಕರಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಏಳು ದಿನಗಳ ಕಸ್ಟಡಿ ಕೇಳಿದ್ದರು.

ಸುಮಾರು 18-20 ಜನರು ಈ ಕ್ರೂರ ದಾಳಿಯಲ್ಲಿ ಭಾಗಿಯಾಗಿದ್ದಾರೆ . ಸುಶೀಲ್ ಕುಮಾರ್ ಅವರ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ ಆದರೆ ಇಬ್ಬರೂ ಆರೋಪಿಗಳಿಗೆ ಸೇರಿದ ಏಳು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಮಯದಲ್ಲಿ ಆರೋಪಿ ಧರಿಸಿದ್ದ ಬಟ್ಟೆಗಳು  ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸುಶೀಲ್ ಕುಮಾರ್ ಕುಸ್ತಿಪಟುವನ್ನು ಥಳಿಸುತ್ತಿರುವ ವೀಡಿಯೊವನ್ನು ಪೊಲೀಸರು ಈ ಹಿಂದೆ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ದಿನಗಳ ಹಿಂದೆ ಕುಸ್ತಿಪಟು ಕೋಲಿನಿಂದ ಹಲ್ಲೆ ಮಾಡಿದ ಚಿತ್ರ ಹರಿದಾಡಿದ್ದವು.

"ಆ ವೀಡಿಯೊವನ್ನು ತಯಾರಿಸಲು ಸುಶೀಲ್ (ಅವನ ಸ್ನೇಹಿತ) ಪ್ಸಿನ್ಸ್ ಗೆ  ಕೇಳಿಕೊಂಡಿದ್ದಾನೆ. ಅವನು ಮತ್ತು ಅವನ ಸಹಚರರು ಮೃತಪಟ್ಟಿರುವ ಕುಸ್ತಿಪಟುವನ್ನು ಪ್ರಾಣಿಯಂತೆ ಹೊಡೆದಿದ್ದರು. ಕುಸ್ತಿ ಕ್ಷೇತ್ರದಲ್ಲಿ ತನ್ನ ಭಯವನ್ನು ಸ್ಥಾಪಿಸಲು ಅವರು ಬಯಸಿದ್ದರು" ಎಂದು ಪೊಲೀಸರು ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News